Select Your Language

Notifications

webdunia
webdunia
webdunia
webdunia

ಇನ್ನು ಎರಡು ವರ್ಷಗಳ ಬಳಿಕ ಅಮೀರ್ ಚಿತ್ರಗಳ ರಿಲೀಸ್ ?!

ಇನ್ನು ಎರಡು ವರ್ಷಗಳ ಬಳಿಕ ಅಮೀರ್ ಚಿತ್ರಗಳ ರಿಲೀಸ್ ?!
, ಶನಿವಾರ, 28 ಮಾರ್ಚ್ 2015 (10:24 IST)
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರು ರಾಜ್ ಕುಮಾರ್ ಹಿರಾನಿ ನಿರ್ದೇಶನದ ಪೀಕೆ ಯಲ್ಲಿ ನಟಿಸಿದ್ದರು. ಅಂದರೆ ಅದು ಅವರ ಅಭಿನಯದ ಇತ್ತೀಚಿನ ಚಿತ್ರವಾಗಿದೆ,ಈಗ ಅವರು ತಮ್ಮ ಮುಂದಿನ ಚಿತ್ರದ ತಯಾರಿಕೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಈಗ ದಂಗಲ್ ಎನ್ನುವ ಹೆಸರಿನ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡಿಸಿದ್ದಾರೆ ಆಮೀರ್. 
ಈ ಚಿತ್ರವು ಕುಸ್ತಿ ಪಟುಗೆ ಸಂಬಂಧ ಪಟ್ಟ ಕಥನವಾಗಿದೆ. ನಟ ಪ್ರಸಿದ್ಧ ಟ್ಯಾಬ್ಲಾಯಿಡ್ ಪತ್ರಿಕೆ  ಸಂದರ್ಶನ ಮಾಡುವ ಸಮಯದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರುಗಳು ಒಂದು ಚಿತ್ರವನ್ನು ಪೂರ್ಣ ಮಾಡಲು ಒಂದು ವರ್ಷವಾದರೂ ತೆಗೆದು ಕೊಳ್ಳುತ್ತಾರೆ, ನೀವು ಅವರಂತೆ ವರ್ಷಗಳ ಗಡುವು ತೆಗೆದು ಕೊಳ್ಳದೆ ಅತಿ ಬೇಗ ಚಿತ್ರ ಮುಗಿಸ್ತೀರಿ ಎನ್ನುವ ಪ್ರಶ್ನೆಗೆ ಆಮೀರ್ ಈ ಸಮಯದಲ್ಲಿ ತಾವು ಈಗ ನಟಿಸುತ್ತಿರುವ ಚಿತ್ರವು ವರ್ಷಕ್ಕಿಂತ ಹೆಚ್ಚು ಸಮಯದಲ್ಲಿ ಪೂರ್ಣವಾಗುತ್ತದೆ ಎನ್ನುವ ಸಂಗತಿಯನ್ನು ಹೇಳಿದ್ದಾರೆ. 
 
ನಾನು ಧೂಮ್ 3 ಮತ್ತು ಪೀಕೆ ಒಂದರ ಹಿಂದೆ ಒಂದರಂತೆ ಪೂರ್ಣ ಮಾಡಿದೆ. ಯಾಕೆಂದರೆ ಚಿತ್ರದ ವಿಷ್ಯ ಆ ರೀತಿ ಇತ್ತು. ಆ ರೀತಿಯಲ್ಲೇ ನಾನು ನಡೆಯುತ್ತೇನೆ ಎಂದು ತಿಳಿಯದಿರಿ. ನನ್ನ ಹೊಚ್ಚ ಹೊಸ ಚಿತ್ರ ದಂಗಲ್ ಪೂರ್ಣ ಆಗಲು ಎರಡು ವರ್ಷಗಳ ಕಾಲಾವಧಿ ಬೇಕಾಗಿದೆ.ಆ ಚಿತ್ರಕ್ಕೆ ಬೇಕಾದ ಪೂರ್ವ ಸಿದ್ಧತೆಗೆ ನಾನು ಆರು ತಿಂಗಳ ಅವಧಿಯನ್ನು ಬಳಕೆ ಮಾಡುತ್ತಿದ್ದೇನೆ. ಇದರಲ್ಲಿ ಆಮೀರ್ ಖಾನ್ ಅವರು ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿಯೂ ಕಾಣಿಸಿ ಕೊಳ್ಳುತ್ತಿದ್ದಾರೆ. ನಿತೀಶ್ ತಿವಾರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 

Share this Story:

Follow Webdunia kannada