Select Your Language

Notifications

webdunia
webdunia
webdunia
webdunia

ವಿಶ್ವ ವ್ಯಾಪಿ ಇರುವ ಎಲ್ಲರ ಗಮನ ನನ್ನ ಮೇಲೆಯೇ: ಕತ್ರಿನಾ

ವಿಶ್ವ ವ್ಯಾಪಿ ಇರುವ ಎಲ್ಲರ ಗಮನ ನನ್ನ ಮೇಲೆಯೇ: ಕತ್ರಿನಾ
, ಬುಧವಾರ, 29 ಏಪ್ರಿಲ್ 2015 (10:11 IST)
ಫ್ರಾನ್ಸ್ ನಗರದಲ್ಲಿ ಕಾನ್ಸ್ ನದಿ ತೀರದಲ್ಲಿ ನಡೆಯು ವಿಶ್ವವಿಖ್ಯಾತ ಕಾರ್ಯಕ್ರಮಕ್ಕೆ ಅದ್ಧೂರಿಯ ಸಿದ್ಧತೆ ನಡೆದಿದೆ. ಅಲ್ಲಿ ನಡೆಯುವ ಚಲನಚಿತ್ರೋತ್ಸವಕ್ಕೆ ಈ ರೀತಿಯ ಸಿದ್ಧತೆ ನಡೆದಿದೆ ಎನ್ನುವುದನ್ನು ನೀವು ಬಲ್ಲಿರಿ ಓದುಗರೇ, ಪ್ರತಿವರ್ಷ ನಡೆಯುವ ಉತ್ಸವದಲ್ಲಿ ಭಾಗವಹಿಸಲು ದೇಶ ವಿದೇಶದಿಂದ ಪ್ರತಿಷ್ಠಿತ ತಾರ ದಂಡೆ ಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಐಶ್ವರ್ಯ ರೈ ಭಾಗವಹಿಸುತ್ತಿದ್ದಾರೆ. ಈಗ ಸೋನಂ ಕಪೂರ್ ಸಹಿತ ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ಸುಂದರವಾಗಿ ನಡೆಯುತ್ತಾ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾಳೆ. 
ಈ ವರ್ಷ ಅಲ್ಲಿಗೆ ಹೋಗಲು ಕತ್ರಿನಾ ಕೈಫ್‌ಗೆ ಅವಕಾಶ ಸಿಕ್ಕಿದೆ. ಒಂದು ಸೌಂದರ್ಯ ಸಾಧನದ ಉತ್ಪನ್ನದ ಪ್ರಚಾರಕರ್ತೆಯಾಗಿ ಅಲ್ಲಿ ಆಕೆ ಕ್ಯಾಟ್ ವಾಕ್ ಮಾಡಲಿದ್ದಾಳೆ. ಮೇ 13ರಿಂದ ಆರಂಭವಾಗುವ ಈ ಕಾರ್ಯಕ್ರಮ ಮೇ 24ಕ್ಕೆ ಪೂರ್ಣವಾಗುತ್ತದೆ. ಈಗ ಕತ್ರಿನಾ ಅಲ್ಲಿ ಯಾವ ರೀತಿಯ ಉಡುಗೆ ಧರಿಸುತ್ತಾಳೆ. ಹೇಗೆ ಕಾಣುತ್ತಾಳೆ, ಎಂತಹ ಆಭರಣ ಧರಿಸುತ್ತಾಳೆ ಎಂಬಿತ್ಯಾದಿಯಾದ ಚರ್ಚೆಗಳು ನಡೆಯುತ್ತಿವೆ. ಈ ವಿಷಯದ ಬಗ್ಗೆ ಮಾತಾಡುತ್ತಾ ಕತ್ರಿನಾ ವಿಶ್ವ ವ್ಯಾಪಿಯಾಗಿ ಎಲ್ಲರ ಗಮನ ನನ್ನ ಮೇಲೆ ಇರುತ್ತದೆ. 
 
ಆ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಲು ತಾರೆಗಳು ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನುವ ಸಂಗತಿ ನನಗೆ ಗೊತ್ತು. ಆದರೂ ಸಹ ನಾನು ಅದರ ಬಗ್ಗೆ ಹೆಚ್ಚು ಟೆನ್ಶನ್ ಪಡಲ್ಲ. ಎಷ್ಟೇ ಚಂದ ಇದ್ದರೂ ಸಹಿತ ವಿಮರ್ಶೆ ಮಾಡುವವರು ಹೇರಳವಾಗಿರುತ್ತಾರೆ. ಆ ಸಂಗತಿ ಮನಕ್ಕೆ ಬಂದರೆ ಆಗ ಆಭಾಸವಾಗುತ್ತದೆ. ಆದ್ದರಿಂದ ನಾನು ನನಗೆ ಹೊಂದುವ ಉಡುಗೆ ದೊರಕದೆ ಇದ್ದರೆ ಸೋನಂ ಬಳಿ ತೆಗೆದುಕೊಂಡು ಧರಿಸುತ್ತೇನೆ ಎನ್ನುವ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾಳೆ. 

Share this Story:

Follow Webdunia kannada