Select Your Language

Notifications

webdunia
webdunia
webdunia
webdunia

ಭಾರತೀಯ ನಾರಿಯರೆಲ್ಲರೂ ಸುಂದರಿಯರು: ಕರೀನಾ

ಭಾರತೀಯ ನಾರಿಯರೆಲ್ಲರೂ ಸುಂದರಿಯರು: ಕರೀನಾ
, ಶುಕ್ರವಾರ, 31 ಜುಲೈ 2015 (10:38 IST)
ಸೈಫ್ ಅಲಿ ಖಾನ್ ಅವರ ಪ್ರಿಯ ಪತ್ನಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಭಾರತೀಯ ನಾರಿಯರೆಲ್ಲರೂ ಸುಂದರಿಯರು ಎಂದು ಹೇಳಿದ್ದಾರೆ. ಕ್ರಾಫ್ಟ್ಸ್ವಿಲ್ಲಾ ಮಿಸ್ ಎಥಿನಿಕ್ ಸ್ಪರ್ಧೆಗೆ ಹೋಗಿದ್ದಾಗ ಈ ಮಾತನ್ನು ಆಡಿದ್ದಾರೆ. ಇದರ ಅಂತಿಮ ಸುತ್ತಿನ ಸ್ಪರ್ಧೆ ಸೆಪ್ಟೆಂಬರ್ 11 ರಂದು ನಡೆಯಲಿದೆ. ಇಡೀ ದೇಶದಿಂದ ಈ ಸ್ಪರ್ಧೆಯಲ್ಲಿ  ಸೂಕ್ತ ಹಾಗೂ ಸಂಬಂಧಿತ ಹೆಣ್ಣುಮಕ್ಕಳು ಭಾಗವಹಿಸುತ್ತಿದ್ದಾರೆ. 
ಭಾರತೀಯ ಸ್ತ್ರೀಯರು ಪ್ರತಿಯೊಬ್ಬರೂ ಅವರದ್ದೇ ಆದ ರೀತಿಯಲ್ಲಿ ಸೌಂದರ್ಯ ಹೊಂದಿದ್ದಾರೆ. ಆದರೆ ಕ್ರಾಫ್ಟ್ಸ್ವಿಲ್ಲಾ ಸ್ಪರ್ಧೆಯು ತಮ್ಮನ್ನು ತಾವು ಸುಂದರಿಯರು ಎಂದು ನಂಬಿರುವವರಿಗೆ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.  ತನ್ನ ನಿರಂತರ ಸಾಧನೆಯಿಂದ  ಕರೀನಾ ತಮ್ಮ ವೃತ್ತಿ ರಂಗದಲ್ಲಿ ಮಾತ್ರವಲ್ಲ ತಮ್ಮ ಜೀರೋ ಸೈಜ್ ಸೇರಿದಂತೆ ಹತ್ತು ಹಲವಾರು ಸಂಗತಿಗಳ ಮೂಲಕ ಜನರ ಗಮನ ಸೆಳೆದಿದ್ದರು. ಅವರು ನಿರ್ದೇಶಕರ ಮೆಚ್ಚಿನ ನಟಿ. ನಿರ್ದೇಶಕರ ಕಲ್ಪನೆಗೆ ಜೀವ ನೀಡುವ ಪ್ರತಿಭಾವಂತೆ. ಬಾಲಿವುಡ್ ಚಿತ್ರರಂಗದಲ್ಲಿ ಸುಂದರಿಯರಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿರುವ ಕರೀನಾ ಅವರಿಗೆ ಭಾರತದ ಹೆಣ್ಣುಮಕ್ಕಳೆಲ್ಲರೂ ಸುಂದರಿಯರಾಗಿ ಕಂಡಿದ್ದು ಆಕೆಯ ವಿಶೇಷ ಗುಣವನ್ನು ಎತ್ತಿ ತೋರುತ್ತಿದೆ. 

Share this Story:

Follow Webdunia kannada