Select Your Language

Notifications

webdunia
webdunia
webdunia
webdunia

ಇಂಡಿಯನ್ ಸೂಪರ್ ಲೀಗ್-2ನಲ್ಲಿ ಸಿನೆಮಾ ತಾರೆಯರ ಸಮಾಗಮ

ಇಂಡಿಯನ್ ಸೂಪರ್ ಲೀಗ್-2ನಲ್ಲಿ ಸಿನೆಮಾ ತಾರೆಯರ ಸಮಾಗಮ
, ಮಂಗಳವಾರ, 6 ಅಕ್ಟೋಬರ್ 2015 (11:06 IST)
ಇಂಡಿಯನ್ ಸೂಪರ್ ಲೀಗ್-2 ಗೆ ಶನಿವಾರ ರಾತ್ರಿ ಚೆನ್ನೈನಲ್ಲಿ ಚಾಲನೆ ದೊರಕಿದೆ. ಲೀಗ್ ನ ಉದ್ಘಾಟನಾ ಕಾರ್ಯಕ್ರಮವಂತೂ ಬಾಲಿವುಡ್ ಹಾಗೂ ಇತರೆ ಭಾಷೆಯ ತಾರೆಯರರ ಸಮಾಗಮಕ್ಕೆ ಸಾಕ್ಷಿಯಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಕುಟುಂಬವೇ ಹಾಜರಿತ್ತು. ಫುಟ್ಭಾಲ್ ಟೂರ್ನಿಯಲ್ಲಿ ಅಭಿಷೇಕ್ ಬಚ್ಚನ್ ಅವರ ಚೆನ್ನೈ ಎಫ್ ಸಿ ತಂಡವಿರೋದರಿಂದ ಅಭಿಷೇಕ್ ಗೆ ಶುಭಾ ಹಾರೈಸೋದ್ಕಕಾಗಿ ಇಡೀ ಕುಟುಂಬವೇ ಬಂದಿತ್ತು. ಬಿಗ್ ಬಿ, ಐಶ್ವರ್ಯಾ ರೈ , ಅಭಿಷೇಕ್, ಮಗಳು ಆರಾಧ್ಯ ಶ್ವೇತಾ ನಂದ ಹೀಗೆ ಬಿಗ್ ಬಿ ಕುಟುಂಬ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
 
ಇನ್ನು ಬಿಗ್ ಬಿ ಕುಟುಂಬ ಮಾತ್ರವಲ್ಲದೇ ಬಾಲಿವುಡ್ ನ ಇತರೆ ತಾರೆಯರು ಆಗಮಿಸಿದ್ದರು. ಅರ್ಜುನ್ ಕಪೂರ್, ಆಲಿಯಾ ಭಟ್, ನಟ ರಜಿನಿಕಾಂತ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್.ನೀತಾ ಅಂಬಾನಿ ಹೀಗೆ ಅನೇಕರು ಹಾಜರಿದ್ದರು. ಇನ್ನು ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ತಮ್ಮ ನೃತ್ಯ ಪ್ರದರ್ಶಿಸಿದ್ರು. ಸದ್ಯ ಐಶ್ ಸಂಜಯ್ ಗುಪ್ತಾ ಅವರ ಜಝ್ಬಾ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada