Select Your Language

Notifications

webdunia
webdunia
webdunia
webdunia

ಹಾಕಿ ಆಟಗಾರ್ತಿಯಾಗಲು ಕಷ್ಟ ಪಡುತ್ತಿರುವ ಅಲಿಯಾ...?!

ಹಾಕಿ ಆಟಗಾರ್ತಿಯಾಗಲು ಕಷ್ಟ ಪಡುತ್ತಿರುವ ಅಲಿಯಾ...?!
, ಶುಕ್ರವಾರ, 27 ಮಾರ್ಚ್ 2015 (10:07 IST)
ಅಲಿಯ ಭಟ್ ಚಿತ್ರರಂಗಕ್ಕೆ ಬಂದ ಗಳಿಗೆಯಿಂದ ಯಶಸ್ಸು ಆಕೆಯ ಪಾಲಾಗಿದೆ. ಗೆಲುವು ಆಕೆಯ ಕೈ ಹಿಡಿದಿದೆ. ಕೇವಲ 22  ವರ್ಷದ ಮೇಲೆ ಒಂದಷ್ಟು ತಿಂಗಳ ವಯಸ್ಸು ಅಷ್ಟೇ. ಈ ತಾರೆ ಬಾಲಿವುಡ್ ನಲ್ಲಿ ಸೃಷ್ಟಿ ಮಾಡಿರುವ ಹಂಗಾಮ ಅಷ್ಟಿಷ್ಟಲ್ಲ. ಸ್ಟೂಡೆಂಟ್ಸ್ ಆಫ್ ದಿ ಇಯರ್, 2 ಚಿತ್ರಗಳ ಮೂಲಕ ಪಕ್ಕದ   ಮನೆಯ ಹುಡುಗಿಯಂತೆ ಕಂಡು ಹುಡುಗರ ಮನ ಗೆದ್ದ ಈ ಚೆಲುವೆ ಈಗ ಸ್ಟೇಟ್ಸ್ ಉಡ್ತಾ ಪಂಜಾಬಿ ಚಿತ್ರದ ಮೂಲಕ ಹಾಕಿ ಆಟಗಾರ್ತಿ ಆಗಿ ಕಂಡು ಬರುತ್ತಿದ್ದಾಳೆ.
ಕರೀನಾ ಕಪೂರ್ ನಾಯಕಿ ಆಗಿರುವ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಜೋಡಿ ಆಗಿದ್ದಾಳೆ ಅಲಿಯ. ಅಭಿಷೇಕ್ ಚೌಬೆ ಅವರ ನಿರ್ದೇಶನದ ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ನಟನೆಗೆಂದು ಅಲಿಯ ಮುಂಜಾನೆ 7 ರಿಂದ ರಾತ್ರಿ 9ರ ತನಕ ಹಾಕಿಯನ್ನು ಪ್ರಾಕ್ಟೀಸ್ ಮಾಡುತ್ತಿರುತ್ತಾಳಂತೆ. ಇಂತಹ ಅಂಶಗಳಿಂದ ಮಾತ್ರ ಯಶಸ್ಸು ಕೈ ಸೇರೋದು. ಕಷ್ಟ ಪಟ್ಟರೆ  ಫಲ ಇದ್ದೆ ಇರುತ್ತದೆಯಲ್ಲ! 

Share this Story:

Follow Webdunia kannada