Select Your Language

Notifications

webdunia
webdunia
webdunia
webdunia

ಪಡ್ಡೆಗಳ ನಿದ್ದೆಗೆಡಿಸಲು ಕನ್ನಡಕ್ಕೆ ಬಂದಿದ್ದಾಳೆ ಸಾಕ್ಷಿ ಪ್ರಧಾನ್?!

ಪಡ್ಡೆಗಳ ನಿದ್ದೆಗೆಡಿಸಲು ಕನ್ನಡಕ್ಕೆ ಬಂದಿದ್ದಾಳೆ ಸಾಕ್ಷಿ ಪ್ರಧಾನ್?!
, ಸೋಮವಾರ, 30 ಮಾರ್ಚ್ 2015 (10:07 IST)
ಕನ್ನಡ ಚಿತ್ರರಂಗ ಮಾದಕತೆಯಿಂದ ಬಿಸಿ ಆಗುತ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಂದು ಕುಣಿದು ಹೋಗಿಯಾಯ್ತು. ಈಗ ಮತ್ತೊಮೆ ಆಕೆ ಬರುವ ಎಲ್ಲ ಸಾಧ್ಯತೆಗಳಿವೆ. ಈ ಎಲ್ಲದರ ನಡುವೆ ಈಗ ಬಂದಿರುವ ಸುದ್ದಿ ಎಂದರೆ ಬಾಲಿವುಡ್‌ನ ಮತ್ತೋರ್ವ ಮಾದಕ ಚೆಲುವೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾಳೆ, ಜೊತೆ ತನ್ನ ಮಾದಕ ರೂಪಸಿರಿಯನ್ನು ಬಿಚ್ಚಿ ತೋರುತ್ತಿದ್ದಾಳೆ. 
ಸಾಕ್ಷಿ ಪ್ರಧಾನ್ ಎನ್ನುವ ಹೆಸರಿನ ಈ ಬೊಂಬೆ ಅತ್ಯಂತ ವಿವಾದಾತ್ಮಕ ಸ್ಪರ್ಧಿ ಆಗಿದ್ದಳು ಹಿಂದಿ ಬಿಗ್ ಬಾಸ್ ನಲ್ಲಿ.ಅಲ್ಲದೆ ಆಕೆ ಎಂಟೀವಿಯ ಸ್ಲಿಟ್ಸ್‌ವಿಲ್ಲಾ(Splitsvilla) ಎನ್ನುವ ರಿಯಾಲಿಟಿ ಷೋ ಸ್ಪರ್ಧಿ  ಆಗಿದ್ದಳು. ಈಗ ತನ್ನೊಂದಿ ವಿವಾದಾತ್ಮಕ ಇತಿಹಾಸ ಪಡೆದಿರುವ ಈಕೆ ಈಗ  ಕನ್ನಡ ಚಿತ್ರರಂಗಕ್ಕೆ ಬಂದಿದ್ದಾಳೆ.ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಸಿದ್ಧವಾಗುತ್ತಿರುವ ವ್ಯಾಘ್ರ/ನಿಂದ್ರುಕೊವ್ಲನ್ ಚಿತ್ರದಲ್ಲಿ ಚೇತನ್ ಚಂದ್ರ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 
 
ವಿ ಶಂಕರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಸಾಕ್ಷಿ ಮತ್ತು ರಾಜೀವ್ ಪಿಳ್ಳೈ ಇಬ್ಬರು ಖಳನಾಯಕಿ-ನಾಯಕರಾಗಿದ್ದಾರೆ. ಅಲ್ಲದೆ ವಿಶೇಷ ಹಾಡಿನ ಮೂಲಕವೂ ಸಹಿತ ಈಕೆ ಕನ್ನಡಿಗರ ನಿದ್ದೆ ದೂರ ಮಾಡಲು ಸಿದ್ಧತೆ ನಡೆಸಿದ್ದಾಳೆ.ತಮ್ಮ ಹಾಡಿಗೆ ಮುಂಬೈ ಹುಡುಗಿ ಬೇಕಾಗಿತ್ತು. ಸಾಕ್ಷಿ ಉತ್ತಮ ಡ್ಯಾನ್ಸರ್. ಈ ಕಾರಣದಿಂದ ಆಕೆಯನ್ನು ಆಯ್ಕೆ ಮಾಡಿಕೊಂಡೆವು ಎನ್ನುವ ಮಾತನ್ನು ಹೇಳಿದ್ದಾರೆ ನಿರ್ದೇಶಕ. 

Share this Story:

Follow Webdunia kannada