Select Your Language

Notifications

webdunia
webdunia
webdunia
webdunia

ರೊಮೇನಿಯಾದಲ್ಲಿ ಅಕ್ಷಯ್ ಕುಮಾರ್ ಸಿಂಗ್ ಈಗ ಬ್ಲಿಂಗ್ ಮಾಡ್ತಾ ಇದ್ದಾರೆ

ರೊಮೇನಿಯಾದಲ್ಲಿ ಅಕ್ಷಯ್ ಕುಮಾರ್ ಸಿಂಗ್ ಈಗ ಬ್ಲಿಂಗ್ ಮಾಡ್ತಾ ಇದ್ದಾರೆ
, ಮಂಗಳವಾರ, 7 ಜುಲೈ 2015 (10:44 IST)
ಸಿಂಗ್ ಈಸ್ ಬ್ಲಿಂಗ್ ಚಿತ್ರ ತಂದ ಈಗ ರೊಮೇನಿಯ ದೇಶದಲ್ಲಿದೆ. ಅಲ್ಲಿ ಏನು ಮಾಡುತ್ತಿದೆ ಎನ್ನುವುದನ್ನು ವಿವರಿಸುವ ಅಗತ್ಯವಿಲ್ಲ, ನಿಮಗೆ ಗೊತ್ತು ಡಿಯರ್ ರೀಡರ್ಸ್, ಆದರೆ ನಾವು ಸಹ ಮತ್ತೊಮ್ಮೆ ಅದರ ಬಗ್ಗೆ ಹೇಳುತ್ತೇವೆ, ಈ ಚಿತ್ರದ ಚಿತ್ರೀಕರಣ ಈಗ ವಿದೇಶದಲ್ಲಿ ನಡೆಯುತ್ತಿದೆ. ಆದ ಕಾರಣ ಚಿತ್ರತಂಡ ಅಲ್ಲಿ ನೆಲೆ ಹೂಡಿದೆ. ಕುನಾಲ್ ಕಪೂರ್ (ಹಿರಿಯ ನಟ ಶಶಿಕಪೂರ್ ಅವರ ಪುತ್ರ )ನಿರ್ಮಾಪಕ ಅಶ್ವಿನಿ   ಯಾರ್ಡಿ ಅವರು ಮುವ್ವತ್ತು ವರ್ಷಗಳ ಬಳಿಕ ಈಗ ಕ್ಯಾಮರ ಮುಂದೆ ಬಂದಿದ್ದಾರೆ. ಸಿಂಗ್  ಈಸ್ ಬ್ಲಿಂಗ್ ಅನೇಕ ಹೊಸ ಹೊಸ ಅಂಶಗಳನ್ನು ಹೊಂದಿದೆ. ಈಗ ಇದು ಸಹಿತ ಅದರಲ್ಲಿ ಒಂದಾಗಿದೆ. 
ಈ ಚಿತ್ರದ  ಮೊದಲ ದಿನದ ಪ್ಯಾಕ್ ಅಪ್ ಆಗುವ ಮುನ್ನ ಆ ಚಿತ್ರದ ಹೀರೋಯಿನ್  ಐ ಚಿತ್ರ ಖ್ಯಾತಿಯ ಅಮಿ ಜಾಕ್ಸನ್ ಇಡಿ ಊರು ಸುತ್ತಿ ಬಂದರಂತೆ. ಅದರಲ್ಲೇನು ವಿಶೇಷ ಎನ್ನುವ ಪ್ರಶ್ನೆ ಕಾಡುವುದು ಸಹಜ. ಸಿನಿಮಾದವರು ಏನೇ ಮಾಡಿದರೂ ಸಹಿತ ಸುದ್ದಿಯಾಗುತ್ತದೆ. ಅದೇರೀತಿ ಆ ಹೆಣ್ಣುಮಗಳು ಓಡಾಡಿದ್ದು ಕಂಡು ಮಾಧ್ಯಮಗಳು ಬರೆದಿವೆ. ಆಕೆ ಸಹ ಕ್ಯಾಮರಾಗಳಿಗೆ ಪೋಸ್ ಕೊಟ್ಟು ತನ್ನ ಸುಂದರ ನಗು ಚೆಲ್ಲಿದ್ದಾರೆ. 
 
ಸಿಂಗ್ ಈಸ್ ಬ್ಲಿಂಗ್ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಮಿ ಜಾಕ್ಸನ್ ಮತ್ತು ಲಾರ ದತ್ತ ಅವರು ನಟಿಸಿದ್ದಾರೆ. ಇದನ್ನು ಪ್ರಭುದೇವ ಅವರು ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ಯಾರ್ಡಿ ನಿರ್ಮಾಣ ಮಾಡಿರುವ ಈ ಚಿತ್ರ ಇದೆ ವರ್ಷ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. 

Share this Story:

Follow Webdunia kannada