Select Your Language

Notifications

webdunia
webdunia
webdunia
webdunia

ವಿಶಾಲ್ ಮುಂದಿನ ಚಿತ್ರದಲ್ಲಿ ಜೋಡಿಯಾಗಲಿರುವ ಅಕ್ಷರಾ

ವಿಶಾಲ್ ಮುಂದಿನ ಚಿತ್ರದಲ್ಲಿ ಜೋಡಿಯಾಗಲಿರುವ ಅಕ್ಷರಾ
, ಶನಿವಾರ, 23 ಮೇ 2015 (10:09 IST)
ಅಕ್ಕ ಶೃತಿ ಹಾಸನ್ ಹಾದಿಯಲ್ಲಿ ನಡೆಯುತ್ತಾ ಹಿಂದಿ ಚಿತ್ರ 'ಶಮಿತಾಬ್' ಮೂಲಕ ಜನರ ಮುಂದೆ ಬಂದಿದ್ದ ಅಕ್ಷರ ಹಾಸನ್ ಉತ್ತಮ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಶಮಿತಾಬ್ ಬಳಿಕ ಅಕ್ಷರಾ ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. 
ಆದರೆ ಪ್ರಸ್ತುತ ವಿಶಾಲ್ ನಾಯಕನಟರಾಗಿ ನಟಿಸಿದ್ದ 'ಪಂದೆಮ್ ಕೋಡಿ' ಚಿತ್ರ ಮುಂದುವರಿದ ಭಾಗವನ್ನು ಮತ್ತೆ ತೆರೆ ಮೇಲೆ ತರುವ ಯತ್ನ ನಡೆಯುತ್ತಿದ್ದು, 'ಪಂದೆಮ್ ಕೋಡಿ2' ಎಂದೇ ನಾಮಕರಣ ಮಾಡಲಾಗಿದೆ. ಇದರಲ್ಲಿ ಅಕ್ಷರ ಅವಕಾಶ ಪಡೆದಿದ್ದಾರೆ. ಆಧರೆ ಇದಕ್ಕೂ ಮುನ್ನ ಇದೇ ಚಿತ್ರದಲ್ಲಿ ಸಮಂತಾ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಆದರೆ ಆ ಸ್ಥಾನವನ್ನು ನಟಿ ಅಕ್ಷರಾ ತುಂಬಲಿದ್ದಾರೆ. 
 
ಪಂದೆಮ್ ಕೋಡಿ ಚಿತ್ರದ ಪ್ರಥಮ ಭಾಗದಲ್ಲಿ ನಾಯಕ ವಿಶಾಲ್ ಜೋಡಿಯಾಗಿ ಮೀರಾ ಜಾಸ್ಮಿನ್ ಕಾಣಿಸಿಕೊಂಡಿದ್ದರು. ಎರಡನೇ ಭಾಗ ಇದಾಗಿದ್ದು, ಪ್ರಸ್ತುತ ಅಕ್ಷರಾ ಪಾಲಾಗಿದೆ. 

Share this Story:

Follow Webdunia kannada