Select Your Language

Notifications

webdunia
webdunia
webdunia
webdunia

ಗ್ಲಾಮರ್ ಬೊಂಬೆಯಾಗಲು ತಯಾರಿಯಲ್ಲಿರುವ ಅಕ್ಷರಾ...?!

ಗ್ಲಾಮರ್ ಬೊಂಬೆಯಾಗಲು ತಯಾರಿಯಲ್ಲಿರುವ ಅಕ್ಷರಾ...?!
, ಮಂಗಳವಾರ, 31 ಮಾರ್ಚ್ 2015 (10:00 IST)
ಭಾರತೀಯ ಚಿತ್ರರಂಗದ ಅಪರೂಪದ ನಟ ಕಮಲ್ ಹಾಸನ್ ಅವರ ಕೊನೆಯ ಮಗಳು ಅಕ್ಷರ ಹಾಸನ್ ಆಕೆಯು ತನ್ನ ಅಕ್ಕ ಶ್ರುತಿ ಹಾಸನ್ ರೀತಿ ಬಾಲಿವುಡ್ ನಿಂದಲೇ ತನ್ನ ತಾರಾ ಪಯಣ ಆರಂಭ ಮಾಡಿದಳು. ಆಕೆ ತನ್ನ ಮೊದಲ ಚಿತ್ರವಾದ ಶಮಿತಾಬ್ ನಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು  ಕಾಲಿವುಡ್ ಸ್ಟಾರ್ ನಟ ಧನುಷ್ ಅವರ ಜೊತೆ ಅಭಿನಯಿಸಿದ್ದಳು. ಆಕೆಯ ನಟನೆ ಎಲ್ಲರ ಮೆಚ್ಚುಗೆ ಗಳಿಸಿತ್ತು.  
ಅಕ್ಷರ ತನಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಳು. ಈಗ ಬಂದಿರುವ ಸುದ್ದಿ ಎಂದರೆ ಈಕೆಗೆ ಬಾಲಿವುಡ್ ಮತ್ತು ಕಾಲಿವುಡ್ ನಲ್ಲೂ ಸಹಿತ ಅನೇಕಾನೇಕ ಅವಕಾಶಗಳು ದೊರೆತಿವೆ. ಆದರೆ ಚಿತ್ರಗಳ ಆಯ್ಕೆ ವಿಷಯದಲ್ಲಿ ಮಾತ್ರ ತಾನು ಗಡಿಬಿಡಿ ಮಾಡಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಅಕ್ಷರ ಹಾಸನ್ ಹೇಳಿದ್ದಾಳೆ. ಅಕ್ಷರ ಹಾಸನ್ ತನ್ನ ಸೌಂದರ್ಯ ಹೆಚ್ಚಿಸಿ ಕೊಳ್ಳುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿದ್ದಾಳೆ ಎನ್ನುವುದೇ ಈಗ ತಿಳಿದು ಬಂದ ಸಂಗತಿಯಾಗಿದೆ. ತನ್ನ ರೂಪ ಹೆಚ್ಚಿಸಿಕೊಳ್ಳಲು  ದೈಹಿಕ ಶಿಕ್ಷಕರು, ಸೌಂದರ್ಯ ತಜ್ಞರು ಹೀಗೆ ಎಲ್ಲರನ್ನು ಒಟ್ಟುಗೂಡಿಸಿ ಕೊಂಡು ರೂಪವನ್ನು ಹೆಚ್ಚಿಸಿ ಕೊಳ್ಳುವತ್ತ ಹೆಚ್ಚಿನ ಗಮನ ನೀಡಿದ್ದಾಳೆ ಆಕೆ.
 
ಇವರೆಲ್ಲರೂ ಬಾಲಿವುಡ್‌ಗೆ ಹೊಂದುವಂತೆ ತಯಾರು ಮಾಡುವುದಾಗಿ ಮಾತು ಕೊಟ್ಟಿದ್ದಾರಂತೆ. ಇತ್ತೀಚಿಗೆ ಆಕೆ ಮುಂಬೈನಲ್ಲಿ ನಡೆದ ಫ್ಯಾಶನ್ ಷೋ ನಲ್ಲಿ ಕ್ಯಾಟ್ ವಾಕ್‌ನಲ್ಲಿ ಪ್ರಸಿದ್ಧ ಮಾಡೆಲ್ ಜೊತೆ ನಡೆದು ಆಕೆ ಎಲ್ಲರ ಗಮನ ಸೆಳೆದಿದ್ದಾಳೆ. ಈ ಸಂಗತಿ ಬಗ್ಗೆ ಆಕೆ ಮಾತಾಡುತ್ತಾ ಓರ್ವ ನಟಿಗೆ ಒಡವೆ, ಉಡುಪು ಎಷ್ಟು ಮುಖ್ಯ ಎನ್ನುವ ಸಂಗತಿಯನ್ನು ಸ್ಪಷ್ಟ ಪಡಿಸಿದ್ದಾಳೆ. ತನ್ನ ಅಕ್ಕ ಶ್ರುತಿ ಹಾಸನ್ ಗ್ಲಾಮರ್ ರೂಪ ಕಂಡು ತಾನು ಸಹ ಅದೇ ರೀತಿ ಬೆಳೆಯುವ ಆಶಯ ಹೊಂದಿರುವ ಈ ಸುಂದರ ಬಾಲಿಕೆ ಇಂತಹ ನಿರ್ಧಾರ ಕೈಗೊಂಡಿದ್ದಾಳೆ. 

Share this Story:

Follow Webdunia kannada