Webdunia - Bharat's app for daily news and videos

Install App

ಅಜಿತ್ ಅತ್ಯುತ್ತಮ ಕಲಾವಿದ: ಶೃತಿ ಹಾಸನ್

Webdunia
ಮಂಗಳವಾರ, 26 ಮೇ 2015 (10:09 IST)
ನಟ ಅಜಿತ್ ಕುಮಾರ್ ಸೂಪರ್ ಶಫ್ ಅಂತೆ.ಹಾಗಂತ ಹೇಳಿರುವವರು ಬೇರೆ ಯಾರೂ ಅಲ್ಲ ಕ್ರೇಜಿ ಹೀರೋಯಿನ್ ಶೃತಿ ಹಾಸನ್. ಟಾಲಿವುಡ್ ಹಾಗೂ ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ನಲ್ಲೂ ಸಹಿತ ಉತ್ತಮ ಅವಕಾಶಗಳನ್ನು ಪಡೆದ ನಟಿ ಶೃತಿ. ಈಗಂತೂ ಆಕೆಯ ಕೈಲಿ ತಮಿಳು ಚಿತ್ರಗಳು ಸಿಕ್ಕಾಪಟ್ಟೆ ಇದೆ. ಒಟ್ಟಾರೆ ಆಕೆ ತಮಿಳು ಚಿತ್ರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಭಿನಯಿಸುತ್ತಾ ಬೇರೆ ಚಿತ್ರಗಳ ಕಡೆಗೆ ಗಮನ ಹರಿಸದಂತೆ ಆಗಿದೆ ಎಂದೇ ಹೇಳ ಬಹುದಾಗಿದೆ.
ಶೃತಿ ಮತ್ತು ಇಳಯದಳಪತಿ ವಿಜಯ್ ಜೊತೆ ನಟಿಸುತ್ತಿರುವ ಪುಲಿ ಚಿತ್ರದ ಶೂಟಿಂಗ್ ಪೂರ್ಣವಾಗಿದೆ. ಈಗ ಆಕೆ ಕಾಲಿವುಡ್ ಟಾಪ್ ಸೂಪರ್ ಸ್ಟಾರ್ ಅಜಿತ್ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಎನೈ ಅರಿಂದಾಲ್ ಚಿತ್ರದ  ನಂತರ ಈಗ ಅಜಿತ್ ಶೃತಿ ಅವರ ಜೊತೆ ನಟಿಸುತ್ತಿದ್ದಾರೆ. ಈ ಮೊದಲು ಅಜಿತ್ ಅವರ ಯಶಸ್ವಿ ಚಿತ್ರಗಳಲ್ಲಿ ಒಂದಾದ ವೀರಮ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವಂ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 
 
ಶೃತಿ ಹಾಸನ್  ಹೀರೋಯಿನ್ ಆಗಿರುವ ಈ ಚಿತ್ರದಲ್ಲಿ ಅಜಿತ್ ತಂಗಿ ಪಾತ್ರಧಾರಿಯಾಗಿದ್ದಾರೆ ಲಕ್ಷ್ಮಿ ಮೆನನ್. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಘಮಘಮ ಎನ್ನುವ ಬಿರಿಯಾನಿ ತಯಾರಿಸಿ ಅಜಿತ್ ಅವರು ಚಿತ್ರತಂಡದವರಿಗೆ ನೀಡಿದರಂತೆ. ಅವರು ತಯಾರಿಸಿದ ಬಿರಿಯಾನಿ ಸೇವಿಸಿದ ಬಳಿಕ ಆಹಾ! ಎಷ್ಟೊಂದು ರುಚಿ ಎನ್ನುವಂತಾಯಿತಂತೆ. ಅಜಿತ್ ಅವರ ಅಡುಗೆ ವಿಷಯದ ಬಗ್ಗೆ ಈಗ ಹೊಗಳಿಕೆ ಕೆಲಸದಲ್ಲಿ ಮಗ್ನರಾಗಿದ್ದಾರೆ ಶೃತಿ. ಅಜಿತ್ ಅತ್ಯುತ್ತಮ ಮನಸ್ಸು ಹೊಂದಿರುವ ವ್ಯಕ್ತಿ ಮಾತ್ರವಲ್ಲ ವಿಶೇಷ ಪಾಕಶಾಸ್ತ್ರ ತಜ್ಞ ಎನ್ನುವ ಬಿರಿದು ನೀಡಿದ್ದಾರೆ ಶೃತಿ. ಅವರ ಜೊತೆಯ ನಟನೆಯು ಸಿಹಿಯಾದ ಅನುಭವ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ಶೃತಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments