Select Your Language

Notifications

webdunia
webdunia
webdunia
webdunia

ವೀರಮ್ ಶಿವ ನಿರ್ದೇಶನದಲ್ಲಿ ಅಜಿತ್ 56 ನೇ ಚಿತ್ರ..ಮತ್ತೆ ಒಂದಾದ ಯಶಸ್ವಿ ಜೋಡಿ

ವೀರಮ್ ಶಿವ ನಿರ್ದೇಶನದಲ್ಲಿ ಅಜಿತ್ 56  ನೇ ಚಿತ್ರ..ಮತ್ತೆ ಒಂದಾದ ಯಶಸ್ವಿ ಜೋಡಿ
, ಸೋಮವಾರ, 20 ಅಕ್ಟೋಬರ್ 2014 (13:41 IST)
ಕಾಲಿವುಡ್ ನ ನಟ ಅಜಿತ್ ಅವರನ್ನು ಅವರ ಅಭಿಮಾನಿಗಳು ತಲ ಎಂದು ಕರೆಯೋದು ಪ್ರೀತಿಯಿಂದ. ಅವರ 55 ನೇ  ಚಿತ್ರಕ್ಕೆ ಆ ಕಾರಣದಿಂದ ತಲ ಎಂದೇ ಹೆಸರು ನೀಡಲಾಗಿದೆ ಎಂದಿದೆ ಒಂದು ಮೂಲ. ಆದರು ಸಹಿತ ಈ ಬಗ್ಗೆ ಇನ್ನು ಸ್ಪಷ್ಟ ಸುದ್ದಿ ಸಿಕ್ಕಿಲ್ಲ.  ಆ ಚಿತ್ರವನ್ನು ಗೌತಂ ಮೆನನ್ ಅವರು ನಿರ್ದೇಶಿಸಿದ್ದಾರೆ. ಆ ಚಿತ್ರದಲ್ಲಿ ಅನುಷ್ಕ ಶೆಟ್ಟಿ ಮತ್ತು ತ್ರಿಶ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.  ಇದು ತುಂಬಾ ಅದ್ಧೂರಿಯ ಚಿತ್ರವಾಗಿದೆ. 
 
ಈ ಚಿತ್ರದ ಶೂಟಿಂಗ್  ಈಗ ಅಂತಿಮ ಘಟ್ಟ ತಲುಪಿದೆ.  ಈ ವರ್ಷ ವೀರಮ್ ಚಿತ್ರ ಬಿಡುಗಡೆ ಆಗಿತ್ತು. ಮುಂದಿನ ವರ್ಷ ಸಂಕ್ರಾಂತಿ ಸಮಯದಲ್ಲಿ ಅಜಿತ್ ಅಭಿನಯದ ಹೊಸ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದಾರೆ 
 
ಚಿತ್ರತಂಡ. ಈ ಮೊದಲೇ ಹೇಳಿದಂತೆ ಇದು ಅಜಿತ್ ಅಭಿನಯದ  55ನೇ ಚಿತ್ರವಾಗಿದೆ. ಈಗ  56ನೇ ಚಿತ್ರಕ್ಕೆ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಅದನ್ನು ಸೂಪರ್ ಹಿಟ್ ಚಿತ್ರ ವೀರಮ್ ನ್ನು ನಿರ್ದೇಶಿಸಿದ್ದ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರಂತೆ. ಇದಕ್ಕೆಂದು ಕಮರ್ಷಿಯಲ್ ಕಥೆಯನ್ನು ಸಿದ್ಧ ಮಾಡಲಾಗಿದ್ದು, ಹಾಸ್ಯ ಪಾತ್ರದಲ್ಲಿ ಸಂತಾನಂ ಅವರು ಕಾಣಿಸಿಕೊಳುತ್ತಿದ್ದಾರಂತೆ. 
 
ಹೀರೋಯಿನ್ ಗೆಂದು ಹಲವಾರು ನಟಿಯರತ್ತ ಗಮನ ಕೊಟ್ಟರು ಇನ್ನು ಯಾರು ನಿರ್ಧಾರವಾಗಿಲ್ಲವಂತೆ. ಇದರ ಶೂಟಿಂಗ್ ಡಿಸೆಂಬರ್ ತಿಂಗಳಲ್ಲಿ ಆರಂಭ ಆಗುವ ಸಾಧ್ಯತೆ ಇದೆ. ಇದರಲ್ಲಿ ಪ್ರಾಯಶಃ ಕಾಲಿವುಡ್ ಸೂಪರ್ ಸ್ಟಾರಿಣಿ ಹನ್ಸಿಕ ನಟಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ  ಕಾಲಿವುಡ್ ಜನರು. 
 

Share this Story:

Follow Webdunia kannada