Select Your Language

Notifications

webdunia
webdunia
webdunia
webdunia

ಈ ಬಾರಿ ವಿಭಿನ್ನವಾಗಿ ಬರ್ತಡೇ ಆಚರಿಸಿಕೊಳ್ಳಲಿದ್ದಾರೆ ಅಭಿಷೇಕ್ ಬಚ್ಚನ್

ಈ ಬಾರಿ ವಿಭಿನ್ನವಾಗಿ ಬರ್ತಡೇ ಆಚರಿಸಿಕೊಳ್ಳಲಿದ್ದಾರೆ ಅಭಿಷೇಕ್ ಬಚ್ಚನ್
, ಶುಕ್ರವಾರ, 5 ಫೆಬ್ರವರಿ 2016 (13:28 IST)
ಇವತ್ತು ನಟ ಅಭಿಷೇಕ್ ಬಚ್ಚನ್ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಬರ್ತಡೇಯನ್ನು ಅತ್ಯಂತ ಸಿಂಪಲ್ ಆಗಿ ಆಚರಿಸಿಕೊಳ್ಳುವ ಅಭಿಷೇಕ್ ಈ ಬಾರಿ ಕೊಂಚ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

 
ಹೌದು... ಪ್ರತಿಬಾರಿ ತಮ್ಮ ಮುಂಬೈ ಜಲ್ಸಾ ನಿವಾಸದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.ಆದ್ರೆ ಈ ಬಾರಿ ಮಾತ್ರ ಅಭಿಷೇಕ್ ಬರ್ತಡೇಯನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಇನ್ನು ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸುತ್ತಾರೆ ಅಂದ್ರೆ ಅಲ್ಲಿ ಕೊಂಚ ವಿಶೇಷತೆ ಇದ್ದೇ ಇರುತ್ತೆ. ಆದ್ರೆ ಏನು ಅನ್ನೋದು ಇದುವರೆಗೂ ಎಲ್ಲೂ ಬಹಿರಂಗವಾಗಿಲ್ಲ.ಇನ್ನು ಬರ್ತಡೇ ಆಚರಣೆ ಬಳಿಕ ಆದಷ್ಟು ಬೇಗ ಅಭಿಷೇಕ್ ಮುಂಬೈಗೆ ವಾಪಸ್ ಆಗಲಿದ್ದಾರೆ. ಅಭಿಷೇಕ್ ಪ್ರೋ ಕಬಡ್ಡಿಯಲ್ಲಿ ಬ್ಯುಸಿಯಾಗಿರೋದರಿಂದ ಬೇಗ ವಾಪಸ್ ಆಗುತ್ತಿದ್ದಾರೆ.
 
ಇನ್ನು ಬರ್ತಡೇಯಲ್ಲಿ ಐಶ್ ಪಾಲ್ಗೊಳ್ಳುತ್ತಾರೋ ಅನ್ನೋದು ಅನುಮಾನ ಮೂಡಿಸಿದೆ. ಯಾಕಂದ್ರೆ ಸದ್ಯ ಸರ್ಬಜೀತ್ ಸಿಂಗ್ ಅವರ ಜೀವನಕಥೆಯಾಧಾರಿತ ಸಿನಿಮಾದಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಆರಾಧ್ಯ ಅನಾರೋಗ್ಯದಿಂದ ಬಳಲುತ್ತಿರೋದರಿಂದ ಅವರ ಉಪಸ್ಥಿತಿ ಅನುಮಾನ ಮೂಡಿಸಿದೆ.

Share this Story:

Follow Webdunia kannada