Webdunia - Bharat's app for daily news and videos

Install App

ನಟ ರಣ್ ಬೀರ್ ಕಪೂರ್ ಬಗ್ಗೆ ಐಶ್ವರ್ಯಾ ಅವರು ಏನ್ ಹೇಳ್ತಾರೆ?

Webdunia
ಮಂಗಳವಾರ, 28 ಜೂನ್ 2016 (09:36 IST)
ಐಶ್ವರ್ಯಾ ರೈ, ನೀಲಿ ಕಂಗಳ ಈ ಚೆಲುವೆಯನ್ನು ತೆರೆ ಮೇಲೆ ನೋಡದಕ್ಕೆ ಅಭಿಮಾನಿಗಳು ಸದಾ ಕಾತುರದಿಂದ ಕಾಯುತ್ತಿರುತ್ತಾರೆ. ವಿವಾಹದ ಬಳಿಕ ಸಿನಿಮಾ ರಂಗದಿಂದ ದೂರವಿದ್ದ ಐಶ್ವರ್ಯಾ ರೈ ಐದು ವರ್ಷ ಗಳ ಬಳಿಕ ಕಳೆದ ವರ್ಷ ರಿಲೀಸ್ ಆದ ಜಸ್ಬಾ ಸಿನಿಮಾ ಮೂಲಕ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ರು.ಆ ಬಳಿಕ ಅನೇಕ ಸಿನಿಮಾಗಳು ಐಶ್ ಬೇಬಿಗೆ ಒಲಿದು ಬಂದವು.

 
ಸದ್ಯ ಐಶ್ವರ್ಯಾ ರೈ ಅವರು ರಣ್ ಬೀರ್ ಕಪೂರ್, ಅನುಷ್ಕಾ ಶರ್ಮಾ ಹಾಗೇ ಫವಾದ್ ಖಾನ್ ಅವರು ಅಭಿನಯಿಸುತ್ತಿರುವ ಕರಣ್ ಜೋಹರ್ ನಿರ್ದೇಶನದ ಯೇ ದಿಲ್ ಹೈ ಮುಷ್ಕಿಲ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಐಶ್ ಬೇಬಿ ರಣ್ ಬೀರ್ ಕಪೂರ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ.ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಐಶ್ವರ್ಯಾ ರೈ ನಾನು ಬಹು ವರ್ಷಗಳ ನಂತರ ಶೂಟಿಂಗ್ ಸೆಟ್ ನಲ್ಲಿ ರಣ್ ಬೀರ್ ಅವರನ್ನು ಭೇಟಿಯಾದೆ.ಅವರು ತುಂಬಾ ಒಳ್ಳೆ ವ್ಯಕ್ತಿ. ಅವರು ಸೆಟ್ ನಲ್ಲಿದ್ದರೆ ಅಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗುತ್ತೆ. ಎಲ್ಲರನ್ನು ನಗಿಸುತ್ತಾ ತಾನು ನಗುತ್ತಾ ಖುಷಿಯಾಗಿರುತ್ತಾರೆ ಅಂತಾ ಐಶ್ವರ್ಯಾ ರೈ ಹೇಳಿದ್ದಾರೆ.
 
ಇನ್ನು ಬಹು ತಾರಾಗಣದ ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಅವರು ಕೂಡ ಅಭಿನಯಿಸುತ್ತಿದ್ದಾರೆ. ಅನುಷ್ಕಾ ಶರ್ಮಾ ವರು ಕೂಡ ಇದೇ ಮೊದಲ ಬಾರಿಗೆ ಐಶ್ವರ್ಯಾ ರೈ ಹಾಗೂ ರಣ್ ಬೀರ್ ಕಪೂರ್ ಅವರೊಂದಿಗೆ ಅಭಿನಯಿಸುತ್ತಿದ್ದು ಸಿನಿಮಾದಲ್ಲಿ  ಮೂರು ಜನರ ಕೆಮಿಸ್ಟ್ರಿ ಹೇಗಿರುತ್ತೆ ಅಂತಾ ನೋಡೋದಕ್ಕೆ ಅಭಿಮಾನಿಗಳು ಬಹು ಕಾತುರದಿಂದ ಕಾಯುತ್ತಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments