ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈಗ ಆ ಪ್ರಶ್ನೆಗೆ ಉತ್ತರ ದೊರೆತಿದೆ. ಅದು ಶಿವಲಿಂಗ. ಈ ಚಿತ್ರವನ್ನು ಪ್ರಸಿದ್ಧ ನಿರ್ದೇಶಕ ಪಿ.ವಾಸು ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಮೊದಲ ಕ್ಲಾಪ್ ಮಾಡಿದ್ದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಎರಡು ದಶಕಗಳಿಂದ ಶಿವಣ್ಣನ ಜೊತೆ ಕೆಲಸ ಮಾಡ ಬೇಕು ಎನ್ನುವಾಸೆ ಹೊಂದಿದ್ದರಂತೆ ಪಿ.ವಾಸು ಅವರು. ಇವರಿಬ್ಬರ ಸ್ನೇಹ ಶಿವಣ್ಣನ ಅಭಿನಯದ ರಥಸಪ್ತಮಿ ಚಿತ್ರದಿಂದ ಆರಂಭವಾಗಿತ್ತು. ಆ ಚಿತ್ರದ ನಂತರ ವಾಸು ಅವರು ಚಿತ್ರವನ್ನು ನಿರ್ದೇಶಿಸ ಬೇಕಿತ್ತು. ಆದರೆ ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಅದು ನನಸಾಗಿದೆ ಎನ್ನುವ ಮಾತನ್ನು ವಾಸು ಈ ಸಮಯದಲ್ಲಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಸಿಐಡಿ ಆಫೀಸರ್ ಆಗಿದ್ದಾರೆ ಶಿವಣ್ಣ. ವೇದಿಕಾ ಶಿವಣ್ಣ ಜೊತೆ ಆಗಿದ್ದಾಳೆ. ಊರ್ವಶಿ ಇದರಲ್ಲಿ ತಾಯಿ ಪಾತ್ರಧಾರಿಯಾಗಿದ್ದಾರೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಈ ಚಿತ್ರದ ಶೂಟಿಂಗ್ ಇದೆ ತಿಂಗಳ 28 ರಿಂದ ಆರಂಭವಾಗಲಿದೆ.