Select Your Language

Notifications

webdunia
webdunia
webdunia
webdunia

ರಾಧಿಕ ಕುಮಾರ ಸ್ವಾಮಿ ಚಿರಂಜೀವಿ ವಯಸ್ಸು ತಿಳಿದಾಗ ನಿಟ್ಟಿಸಿರು ಬಿಟ್ಟಿದ್ಯಾಕೆ ?

ರಾಧಿಕ ಕುಮಾರ ಸ್ವಾಮಿ ಚಿರಂಜೀವಿ ವಯಸ್ಸು ತಿಳಿದಾಗ ನಿಟ್ಟಿಸಿರು ಬಿಟ್ಟಿದ್ಯಾಕೆ ?
, ಮಂಗಳವಾರ, 27 ಜನವರಿ 2015 (10:47 IST)
ರಾಧಿಕ ಕುಮಾರ್ ಸ್ವಾಮಿಗೆ ಸಿಕ್ಕಾಪಟ್ಟೆ ಥ್ರಿಲ್ ಮತ್ತು ರೋಮಾಂಚನ ಆಗಿದೆಯಂತೆ. ಆಕೆ ಈಗ ಗುರು ದೇಶಪಾಂಡೆ ಅವರ ನಿರ್ದೇಶನದ ಚಿತ್ರ ರುದ್ರತಾಂಡವ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾಳೆ. ಅದರಲ್ಲಿ ಕನ್ನಡಿಗರ ಮೆಚ್ಚಿನ ಯುವನಟ ಚಿರಂಜೀವಿ  ಸರ್ಜಾ ಮುಖ್ಯ ಪಾತ್ರಧಾರಿ ಆಗಿದ್ದಾರೆ. ತಾನು ಹೊಸ ಸಹ ನಟನ ಜೊತೆ ನಟಿಸುತ್ತಿರುವುದಕ್ಕೆ ಹೆಚ್ಚು ಖುಷಿ ಆಗಿದೆ ಎಂದು ಹೇಳಿದ್ದಾಳೆ ಈ ಚೆಲುವೆ. ಆಕೆಯ ವಯಸ್ಸಿನ ಬಗೆ ಮಾಧ್ಯಮಗಳು ಮಾತನಾಡಿದಾಗ ತಾನು ಚಿರುಗಿಂತ ಕಿರಿಯಳು ಎಂದು ತಿಳಿದು ಖುದ್ದು ಆಕೆಗೆ ಆಶ್ಚರ್ಯ ಆಯಿತಂತೆ. ಹಾಗಂತ ಹೇಳಿದ್ದಾಳೆ. 
ವಿಶೇಷ ಅಂದ್ರೆ ಚಿರು ತನಗಿಂತ ದೊಡ್ಡವರು ಎನ್ನುವ ಸಂಗತಿಯು ಆಕೆಯಲ್ಲಿ ಖುಷಿ ತಂದಿದೆ. ಕಲಾವಿದರಿಗೆ ನಟನೆ ಬಿಟ್ಟು ಬೇರೇನೂ ಗೊತ್ತಿರಲ್ಲ, ಅಂತಹುದರಲ್ಲಿ ಅವರು ಚಿಕ್ಕವರು ದೊಡ್ಡವರು ಎಂದೆನ್ನದೆ ತಮ್ಮ ನಟನಾ ಸಾಮರ್ಥ್ಯ ತೋರುತ್ತಾರೆ . ಅದ್ಯಾಕೋ ಗೊತ್ತಿಲ್ಲ ರಾಧಿಕಾಗೆ ಮಾತ್ರ ತಾನು ಚಿರುಗಿಂತ ಚಿಕ್ಕವಳು ಎನ್ನುವ ಸಂಗತಿ ಜಾಸ್ತಿ ರಿಲೀಫ್ ನೀಡಿದೆಯಂತೆ.. ! ಯಾಕಿರಬಹುದು ? ಅವೆಲ್ಲ  ನಿಮ್ಮ ಊಹೆಗೆ ಬಿಟ್ಟಿದ್ದು. 
 

Share this Story:

Follow Webdunia kannada