Webdunia - Bharat's app for daily news and videos

Install App

ಅನುಷ್ಕಾ ಶೆಟ್ಟಿ ತೂಕ ಕಡಿಮೆ ಆಗದೆ ಇರಲು ಕಾರಣ ಗೊತ್ತೇ?

Webdunia
ಬುಧವಾರ, 8 ಮಾರ್ಚ್ 2017 (13:13 IST)
ಪಾತ್ರಕ್ಕಾಗಿ ಕೆಲವು ತಾರೆಗಳು ಯಾವುದೇ ಸಾಹಸಕ್ಕೂ ಕೈಹಾಕುತ್ತಾರೆ. ಆ ರೀತಿಯ ತಾರೆಯಲ್ಲಿ ನಮ್ಮ ಕನ್ನಡ ಮೂಲಕ ಅನುಷ್ಕಾ ಶೆಟ್ಟಿ ಸಹ ಒಬ್ಬರು. ಅದರಲ್ಲೂ ನಾಯಕಿ ಪ್ರಧಾನ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಕಲಾವಿದೆ. ತೆಲುಗಿನಲ್ಲಿ ಬಂದ ’ಜೀರೋ ಸೈಜ್’ ಚಿತ್ರದ ಪಾತ್ರಕ್ಕಾಗಿ ಏಕಾಏಕಿ 80 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು.
 
ಆದರೆ ದುರದೃಷ್ಟವಶಾತ್ ಆ ಚಿತ್ರ ಸದ್ದು ಮಾಡಲಿಲ್ಲ. ಆಕೆಯ ತೂಕದ ಸಮಸ್ಯೆ ’ಬಾಹುಬಲಿ’ ಚಿತ್ರದ ಮೇಲೆ ಬಿತ್ತು. ಆದರೂ ಪಟ್ಟುಬಿಡದ ಈ ಯೋಗ ಟೀಚರ್ ಅಷ್ಟೊ ಇಷ್ಟೋ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಆದರೂ ಮೊದಲಿನ ಆಕಾರಕ್ಕೆ ಬದಲಾಗಲಿಲ್ಲ.
 
ಬಾಹುಬಲಿ  2 ಚಿತ್ರದಲ್ಲಿ ನಿರ್ದೇಶಕರು ಆಕೆಯನ್ನು ಬಳುಕುವ ಬಳ್ಳಿಯಂತೆ ತೋರಿಸಲು ಹೆಚ್ಚಾಗಿ ವಿಎಫ್‍ಎಕ್ಸ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲಾ ಪಕ್ಕಕ್ಕಿಟ್ಟರೆ ಅನುಷ್ಕಾ ತೂಕ ಕಡಿಮೆಯಾಗದಿರಲು ಕಾರಣ ಬೇರೆ ಇದೆಯಂತೆ. ಇದರ ಬಗ್ಗೆ ಅನುಷ್ಕಾ ತುಟಿಬಿಚ್ಚಿದ್ದಾರೆ.
 
ಈ ರೀತಿ ತೂಕ ಹೆಚ್ಚಿಸಿಕೊಳ್ಳುವುದು, ಕರಗಿಸುವುದು ತನಗೇನು ಹೊಸದೇನಲ್ಲ ಎನ್ನುವ ಅನುಷ್ಕಾ, ಬಾಹುಬಲಿ 2 ಚಿತ್ರಕ್ಕೂ ತೂಕ ಇಳಿಸಿಕೊಂಡಿದ್ದರಂತೆ. ಆದರೆ ’ಸಿಗಂ 3’ ಚಿತ್ರದಲ್ಲಿ ನಡೆದ ಘಟನೆಯಿಂದ ಅವರು ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿತ್ತಂತೆ. ಹಾಗಾಗಿ ಅವರ ತೂಕ ಹೆಚ್ಚಾಗಿದೆಯಂತೆ. ಈಗ ಮತ್ತೆ ವ್ಯಾಯಾಮ, ಯೋಗ ಮಾಡುತ್ತಿದ್ದು ಶೀಘ್ರದಲ್ಲೇ ಮತ್ತೆ ಬಳುಕುವ ಬಳ್ಳಿಯಂತಾಗುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

ಮುಂದಿನ ಸುದ್ದಿ
Show comments