Select Your Language

Notifications

webdunia
webdunia
webdunia
webdunia

ಶಿವಣ್ಣ-ಸುದೀಪ್ ಚಿತ್ರದಲ್ಲಿ ಶ್ರುತಿ ಹರಿಹರನ್‌ಗೆ ಚಾನ್ಸ್

ಶಿವಣ್ಣ-ಸುದೀಪ್ ಚಿತ್ರದಲ್ಲಿ ಶ್ರುತಿ ಹರಿಹರನ್‌ಗೆ ಚಾನ್ಸ್
Bangalore , ಮಂಗಳವಾರ, 24 ಜನವರಿ 2017 (10:16 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದಲ್ಲಿ ಮೂಡಿಬರಲಿರುವ ಚಿತ್ರ ’ದಿ ವಿಲನ್’. ಈ ಚಿತ್ರಕ್ಕೆ ಜೋಗಯ್ಯ ಖ್ಯಾತಿಯ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಸಿನೆಮಾ ಇದು.
 
ಈ ಚಿತ್ರಕ್ಕೆ ಹೊಸ ಸೇರ್ಪಡೆ ಎಂದರೆ ನಟಿ ಶ್ರುತಿ ಹರಿಹರನ್. ಈ ಬಗ್ಗೆ ಮಾತನಾಡಿರುವ ಶ್ರುತಿ ಹರಿಹರನ್, ಅವರ ಜತೆ ನೃತ್ಯ ಮಾಡಿದ್ದೇನೆ. ಶಿವಣ್ಣನ ಎನರ್ಜಿ, ಅವರ ವಿನಯವಂತಿಕೆಯನ್ನು ಹತ್ತಿರದಿಂದ ಕಂಡಿದ್ದೇನೆ ಎಂದಿದ್ದಾರೆ. 
 
ಚಿತ್ರದಲ್ಲಿ ಶ್ರುತಿ ಹರಿಹನ್ ಪಾತ್ರ ಏನು ಎತ್ತ ಎಂಬುದು ಸದ್ಯಕ್ಕೆ ಇನ್ನೂ ಗೊತ್ತಾಗಿಲ್ಲ. ಚಿತ್ರದಲ್ಲಿ ವಿಲನ್ ಯಾರು ಎಂಬ ಬಗ್ಗೆಯೂ ಪ್ರೇಮ್ ಗುಟ್ಟು ಬಿಟ್ಟುಕೊಡುತ್ತಿಲ್ಲ. ಹಾಗಾಗಿ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಇದೆ. ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಸಿನಿಮಾ ಇದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಸೆಕ್ಸ್ ಮಾಡಿದ್ದೀಯಾ??? ಹೌದು ಆತನೊಂದಿಗೆ ಸ್ನಾನ ಸಹ...