Webdunia - Bharat's app for daily news and videos

Install App

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ಭಾವನಾ

Webdunia
ಸೋಮವಾರ, 19 ಡಿಸೆಂಬರ್ 2016 (10:22 IST)
ಭಾವನಾ ಎಂದರೆ ಯಾರಿಗೆ ಆಗಲಿ ಯಾವ ಭಾವನಾ ಅನ್ನೋ ಡೌಟು ಬರುತ್ತೆ. ನಾವು ಮಾತನಾಡುತ್ತಿರುವುದು ’ಜಾಕಿ’, ವಿಷ್ಣುವರ್ಧನ, ರೋಮಿಯೋ, ಟೋಪಿವಾಲಾ, ಮುಕುಂದ ಮುರಾರಿ ಭಾವನಾ ಬಗ್ಗೆ. ಈ  ಮಲ್ಲು ಬೆಡಗಿ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಒಂದಷ್ಟು ದಿನ ಟಾಲಿವುಡ್‍ನಲ್ಲೂ ಕಾಣಿಸಿಕೊಂಡರು.
 
ಆದರೆ ಕನ್ನಡ ಚಿತ್ರೋದ್ಯಮದಷ್ಟು ಸಕ್ಸಸ್ ಬೇರೆ ಭಾಷೆಯಲ್ಲಿ ಬರಲಿಲ್ಲ. ಮೂಲಗಳ ಪ್ರಕಾರ ಕನ್ನಡ ನಿರ್ಮಪಕರೊಬ್ಬರ ಕೈಹಿಡಿಯಲಿದ್ದಾರೆ ಭಾವನಾ. ಇವರಿಬ್ಬರ ನಡುವೆ ಕೆಲಕಾಲದಿಂದ ಪ್ರೇಮ ವ್ಯವಹಾರವೂ ನಡೆಯುತ್ತಿದೆ ಎಂಬ ಸುದ್ದಿ ಇದೆ. ಈ ವಿಷಯವನ್ನು ಸ್ವತಃ ಭಾವನಾ ಅಂಗೀಕರಿಸಿದ್ದಾರೆ ಕೂಡ.
 
ಇಷ್ಟಕ್ಕೂ ಆ ನಿರ್ಮಾಪಕ ಯಾರು ಎಂದರೆ ಅದನ್ನು ಮಾತ್ರ ಈಗ ಹೇಳಲ್ಲ. ಸಮಯ ಬಂದಾಗ ಹೇಳುತ್ತೇನೆ ಅಂತಿದ್ದಾರೆ. ಇವರಿಬ್ಬರದ್ದೂ ತುಂಬಾ ಗಾಢವಾದ ಪ್ರೇಮವಂತೆ. ಶೀಘ್ರದಲ್ಲೇ ಹಸೆಮಣೆ ಏರುವ ಸೂಚನೆ ಇದೆ. ಈಗಾಗಲೆ ಇವರಿಬ್ಬರ ಮದುವೆ ಆಗಬೇಕಿತ್ತಂತೆ. ಆದರೆ ಭಾವನಾ ತಂದೆ ಹಠಾತ್ ಮರಣದಿಂದ ಮುಂದಕ್ಕೆ ಹೋಗಿದೆ ಎನ್ನುತ್ತವೆ ಮೂಲಗಳು.
 
ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮದುವೆ ಎನ್ನಲಾಗಿದೆ. ತನ್ನ ಚಿರಕಾಲದ ಪ್ರೇಮಿಯ ಕೈಹಿಡಿಯಲಿದ್ದಾರೆ ಭಾವನಾ. ವಿಶೇಷ ಎಂದರೆ ಮದುವೆಯನ್ನು ಆಡಂಬರವಾಗಿ ಮಾಡಿಕೊಳ್ಳದೆ ತುಂಬಾ ಸಿಂಪಲ್ ಆಗಿ ಮಾಡಿಕೊಳ್ಳಲಿದ್ದಾರೆ ಎಂಬುದು. ಕೇವಲ ಬಂಧುಬಳಗವನ್ನು ಆಹ್ವಾನಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ಭಾವನಾ ಕನ್ನಡದ ಚೌಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

Operation Sindoor: ದೇಶಕ್ಕಾಗಿ ದಿಟ್ಟ ಹೆಜ್ಜೆಯಿಟ್ಟ ಕಮಲ್ ಹಾಸನ್, ಬೇರೆಲ್ಲ ಆಮೇಲೆ ಎಂದ ನಟ

ಚಂದನ್ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾ ವಲ್ಲಭ ಸೀರಿಯಲ್ ನಟಿ ಸುಪ್ರೀತಾ

ಮುಂದಿನ ಸುದ್ದಿ
Show comments