Webdunia - Bharat's app for daily news and videos

Install App

ಕಷ್ಟದ ಸಮಯದಲ್ಲಿ ಕೈ ಹಿಡಿದರು ಎಂದು ವೇದಿಕೆಯಲ್ಲೇ ನಟನ ಕಾಲಿಗೆ ಬಿದ್ದ ನಟಿ ಅಪೂರ್ವ

Krishnaveni K
ಶನಿವಾರ, 9 ನವೆಂಬರ್ 2024 (10:00 IST)
ಬೆಂಗಳೂರು: ಜೊತೆ ಜೊತೆಯಲಿ ಪುಷ್ಪ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ. ಅವರು ಈಗ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ನಾಯಕನ ಅಮ್ಮನ ಪಾತ್ರ ಮಾಡುತ್ತಿದ್ದಾರೆ. ಅವರೀಗ ತಮ್ಮ ನಿಜ ಜೀವನದಲ್ಲಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಹಿರಿಯ ನಟನನ್ನು ವೇದಿಕೆಯಲ್ಲೇ ಕಾಲಿಗೆ ಬಿದ್ದು ನಮಸ್ಕರಿಸಿದ ಘಟನೆ ನಡೆದಿದೆ.

ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ವಿಶಾಲು ಪಾತ್ರ ಮಾಡುತ್ತಿರುವ ನಟಿ ಅಪೂರ್ವಗೆ ಓದುವುದಕ್ಕೆ ಬರುವುದಿಲ್ಲ. ತೀರಾ ಚಿಕ್ಕ ವಯಸ್ಸಿನಿಂದಲೇ ಮನೆಯ ಜವಾಬ್ಧಾರಿ ಜೊತೆಗೆ ಮದುವೆ ಮಾಡಿಕೊಂಡು ಗಂಡನಿಂದಲೂ ದೂರವಾಗಿರುವ ನಟಿ ಅಕ್ಷರ ಕಲಿತಿಲ್ಲ. ಹಾಗಿದ್ದರೂ ಡೈಲಾಗ್ ಗಳನ್ನು ಹೇಳಿಸಿಕೊಂಡು ಕಂಠಪಾಠ ಮಾಡಿಕೊಂಡು ಡೆಲಿವರಿ ಮಾಡುತ್ತಾರೆ.

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗು ಜೀ ಎಂಟರ್ ಟೈನ್ ಮೆಂಟ್ ಕಾರ್ಯಕ್ರಮದಲ್ಲಿ ಮತ್ತೊಂದು ವಿಚಾರವನ್ನು ಅವರು ಬಾಯಿ ಬಿಟ್ಟಿದ್ದಾರೆ. ಅಪೂರ್ವಗೆ ಆರಂಭದಲ್ಲಿ ‘ಹ’ ಕಾರ, ‘ಸ’ಕಾರ ಕಷ್ಟವಾಗುತ್ತಿತ್ತಂತೆ. ಈ ಸಂದರ್ಭದಲ್ಲಿ ಅವರು ಸೆಟ್ ನಲ್ಲಿ ಬೈಸಿಕೊಂಡಿದ್ದರಂತೆ.

ಆಗ ನನ್ನ ಕಷ್ಟಕ್ಕೆ ನೆರವಾಗಿದ್ದು ಇವರು ಎಂದು ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ತಂದೆ ಶ್ರೀನಿವಾಸ್ ಪಾತ್ರ ಮಾಡುತ್ತಿರುವ ಹಿರಿಯ ನಟ ಅಶೋಕ್ ಜೆಂಬೆ ಎಂದು ರಿವೀಲ್ ಮಾಡಿದ್ದಾರೆ. ಆಗ ಹೈದಾಬಾದ್ ನಲ್ಲಿ ಶೂಟಿಂಗ್ ಮಾಡುತ್ತಿದ್ದೆ. ಡೈಲಾಗ್ ಸರಿ ಆಗುತ್ತಿರಲಿಲ್ಲವೆಂದು ಡೈಲಾಗ್ ಪ್ರಾಕ್ಟೀಸ್ ಮಾಡಿಕೊಂಡು ಬಾ ಎಂದು ಕಳುಹಿಸಿದ್ದರು. ಅದೇ ಸಿನಿಮಾದಲ್ಲಿ ಶ್ರೀನಿವಾಸ್ ಸರ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ನನ್ನ ಬಳಿ ಬಂದು ಏನೂ ಚಿಂತೆ ಮಾಡಬೇಡಿ ಎಂದು ಶ, ಹ ಹೇಳುವುದನ್ನು ಹೇಳಿಕೊಟ್ಟರು. ಅವರು ಆವತ್ತು ನನ್ನನ್ನು ತಿದ್ದಿದ್ದಕ್ಕೆ ನಾನು ಈವತ್ತು ಈ ಮಟ್ಟಕ್ಕೆ ಬಂದಿದ್ದೇನೆ. ಅವರು ನನಗೆ ಗುರುಗಳ ಸಮಾನ ಎಂದು ಅಪೂರ್ವ ವೇದಿಕೆಯಲ್ಲೇ ಅಶೋಕ್ ಜೆಂಬೆಯವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಮುಂದಿನ ಸುದ್ದಿ
Show comments