Webdunia - Bharat's app for daily news and videos

Install App

ಎರಡೂ ಕೈಗಳನ್ನ ಕಳೆದುಕೊಂಡ ಅಭಿಮಾನಿಯ ನೆರವಿಗೆ ನಿಂತ ನಟ ಯಶ್

Webdunia
ಸೋಮವಾರ, 30 ಜುಲೈ 2018 (12:15 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ತನ್ನ ಎರಡೂ ಕೈಗಳನ್ನ ಕಳೆದುಕೊಂಡು ಕಷ್ಟದಲ್ಲಿರುವ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯಹಸ್ತ ನೀಡಿದ್ದಾರೆ.


ಹಾವೇರಿ ಮೂಲದ ಅಗಡಿ ಗ್ರಾಮದ 24 ವರ್ಷದ ಯುವಕ ಹರೀಶ್ ಅವರು ಯಶ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ತಳ್ಳುವ ಗಾಡಿಯಲ್ಲಿ ಊಟ ತಿಂಡಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ಜೊತೆಗೆ ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಈ ಹರೀಶ್ ಮಾರ್ಚ್​ನಲ್ಲಿ ನಡೆದ ಊರ ಜಾತ್ರೆಯಲ್ಲಿ ಯಶ್​ರ ಕಟೌಟ್ ಕಟ್ಟಲು ಹೋಗಿ, ಅಚಾನಕ್ಕಾಗಿ ತಗುಲಿದ ವಿದ್ಯುತ್ ಕಂಬಿಯಿಂದ ತನ್ನ ಎರಡೂ ಕೈಗಳನ್ನ ಕಳೆದುಕೊಂಡಿದ್ದಾನೆ. ಈ ವಿಷಯ ತಿಳಿದ ಯಶ್, ಆತನನ್ನ ಭೇಟಿ ಮಾಡಿದ್ದಾರೆ.


ಅಲ್ಲದೇ ನಟ ಯಶ್ ಅವರು  ಕೇವಲ ಪರಿಹಾರ ಮೊತ್ತ ನೀಡಿ ಕೈ ತೊಳೆದುಕೊಳ್ಳದೇ ಆತನ ಇಡೀ ಜೀವನಕ್ಕೆ ಆಸರೆಯಾಗುವಂತಹ ನೆರವು ನೀಡಲು ಮುಂದಾಗಿದ್ದಾರೆ. ಯಶ್, ತಜ್ಞರ ಜೊತೆ ಮಾತನಾಡಿ, ಹರೀಶ್​ಗೆ ಲೈಫ್ ಲಾಂಗ್ ಜೀವನ ಪೋಷಣೆಗೆ ಅಂತ ಕೆಲಸ ಮತ್ತು ಚಿಕಿತ್ಸೆ ನೀಡಿಸೋ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನು ಈ ರೀತಿ ಅಭಿಮಾನ ತೋರೋಕ್ಕೆ ಹೋಗಿ ಜೀವಕ್ಕೆ ಕುತ್ತು ತಂದುಕೋಬೇಡಿ ಎಂದು  ಯಶ್ ಅಭಿಮಾನಿಗಳಿಗೆ ಕಿವಿಮಾತನ್ನು ಕೂಡ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಹಲ್ಲೆ ಪ್ರಕರಣ: ರೌಡಿಶೀಟರ್‌ ಅರೆಸ್ಟ್‌

ಚುಮು ಚುಮು ಅನ್ನಿಸ್ತಾ ಇದ್ಯಾ: ವಿನಯ್ ರಾಜ್‌ಕುಮಾರ್‌ ಕೈಹಿಡಿದು ನಡೆದ ರಮ್ಯಾಗೆ ಬಗೆ ಬಗೆ ಕಮೆಂಟ್ಸ್‌

ಜೈಲು ಸೇರಿ 28ದಿನಗಳ ಬಳಿಕ ಸೂರ್ಯನ ಕಂಡು ನಿಟ್ಟುಸಿರು ಬಿಟ್ಟ ದರ್ಶನ್‌

BB 12: ಕನ್ನಡ ಹಿರಿಯ ನಟಿ ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಸಾಧ್ಯತೆ

ಬಹುಕೋಟಿ ವಂಚನೆ ಪ್ರಕರಣ: ನಟ ಧ್ರುವ ಸರ್ಜಾಗೆ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments