Webdunia - Bharat's app for daily news and videos

Install App

ಮಲೆಯಾಳಿ ನಟಿಗೆ ದಿಲೀಪ್ ಲೈಂಗಿಕ ಕಿರುಕುಳ ನೀಡಿದ್ದರ ಹಿಂದಿದೆ ಸೇಡಿನ ಕಿಚ್ಚು

Webdunia
ಬುಧವಾರ, 12 ಜುಲೈ 2017 (20:13 IST)
ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಪೋಟಕ ಸುದ್ದಿ ಹೊರಬರುತ್ತಿದೆ. ಪ್ರಕರಣದಲ್ಲಿ ಸಂಚು ರೂಪಿಸಿದ ಆರೋಪದಡಿ ನಟ ದಿಲೀಪ್ ಅವರನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಮಲೆಯಾಳಂ ಚಿತ್ರರಂಗದ ಕಲಾವಿದರ ಸಂಘದಿಂದಲೂ ಅವರನ್ನ ಹೊರಗಿಡಲಾಗಿದೆ. ನಟಿ ಮೇಲಿನ ಹಳೆಯ ದ್ವೇಷದ ಸೇಡು ತೀರಿಸಿಕೊಳ್ಳಲು ದಿಲೀಪ್ ಈ ಹೀನ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
 

ದಿಲೀಪ್ ವಿವಾಹೇತರ ಸಂಬಮಧ ಹೊಂದಿದ್ದನ್ನ ತಿಳಿದಿದ್ದ ನಟಿ ಆ ಬಗ್ಗೆ ದಿಲೀಪ್ ಪತ್ನಿಗೆ ಮಾಹಿತಿ ನೀಡಿದ್ದರು. ಇದು ನಟ ದಿಲೀಪ್`ಗೆ ಅರಗಿಸಿಕೊಳ್ಳಲಾಗಲಿಲ್ಲ. ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಪೂರ್ವ ತಯಾರಿ ವೇಳೆ ನಟಿ ಜೊತೆ ದಿಲೀಪ್ ವಾಗ್ವಾದವನ್ನೇ ನಡೆಸಿದ್ದ. ಈ ಘಟನೆಯೇ ದಿಲೀಪ್ ನಟಿಗೆ ಲೈಂಗಿಕ ಕಿರುಕುಳ ನೀಡಲು ಕಾರಣವಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸೇಡು ತೀರಿಸಿಕೊಳ್ಳಲು ದಿಲೀಪ್ ಲೈಂಗಿಕ ಕಿರುಕುಳದ ಅಸ್ತ್ರ ಬಳಸಿದ್ದಾನೆ ಎನ್ನಲಾಗಿದೆ.

ನಟಿ ಮೇಲೆ ಒಳಗೊಳಗೇ ಕುದಿಯುತ್ತಿದ್ದ ದಿಲೀಪ್, ಕ್ರಿಮಿನಲ್ ಪಲ್ಸಾರ್ ಸುನಿಯನ್ನ ಸಂಪರ್ಕಿಸುತ್ತಾನೆ. ನಟಿಯನ್ನ ಅಪಹರಿಸಿ ಆಕೆಯ ಅಶ್ಲೀಲ ಫೋಟೋಗಳನ್ನ ಶೂಟ್ ಮಾಡಿ ಮಾನಕಳೆಯುವಂತೆ ಸಂಚು ರೂಪಿಸುತ್ತಾನೆ. ಬೆತ್ತಲೆ ವಿಡಿಯೋ ಜೊತೆ ಇತ್ತೀಚಿನ ನಿಶ್ವಿತಾರ್ಥದ ರಿಂಗ್ ವಿಡಿಯೋವನ್ನೂ ಮಾಡಿ ಮಾನ ತೆಗೆಯುವಂತೆ ಹೇಳಿರುತ್ತಾನೆ. ಮಾಡಬಾರದ್ದನ್ನ ಮಾಡಿ ಈಗ ಜೈಲು ಪಾಲಾಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sara Tendulkar: ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಗೆ ಹೊಸ ಬಾಯ್ ಫ್ರೆಂಡ್: ಸಾರಾ ಹೊಸ ಹುಡುಗ ಯಾರು ಗೊತ್ತಾ

Sonu Nigam: ವಿವಾದದ ಬಳಿಕ ಸೋನು ನಿಗಂ ಕನ್ನಡ ಬೆದರಿಕೆ ಕುರಿತು ಸ್ಪಷ್ಟನೆ ಕೊಟ್ಟಿದ್ದು ಹೀಗೆ

ಕನ್ನಡತನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಗಾಯಕ ಸೋನು ನಿಗಮ್‌ಗೆ ಸಂಕಷ್ಟ: ದೂರು ದಾಖಲು

Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

ಎಡವಟ್ಟು ಮಾಡಿಕೊಂಡ ನಟ ವಿಜಯ್​ ದೇವರಕೊಂಡ: ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದೇಕೆ

ಮುಂದಿನ ಸುದ್ದಿ