Webdunia - Bharat's app for daily news and videos

Install App

ಸಿಂಗಂ 4ರ ಕಡೆಗೆ ದೃಷ್ಟಿ ನೆಟ್ಟ ನಟ ಸೂರ್ಯ

Webdunia
ಬುಧವಾರ, 15 ಫೆಬ್ರವರಿ 2017 (12:26 IST)
ಸೂರ್ಯ ಮುಖ್ಯಭೂಮಿಕೆಯಲ್ಲಿರುವ ಸಿಂಗಂ ಸರಣಿಯಲ್ಲಿ ಬಂದ ಚಿತ್ರ ಸಿಂಗಂ 3. ಅನುಷ್ಕಾ ಶೆಟ್ಟಿ, ಶ್ರುತಿ ಹಾಸನ್ ಈ ಚಿತ್ರದ ಇಬ್ಬರು ನಾಯಕಿಯರು. ಹರಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಈಗಾಗಲೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸಲ್ಲೂ ಒಳ್ಳೆಯ ಪ್ರತಿಕ್ರಿಯೆಗೆ ಪಾತ್ರವಾಗಿದೆ.
 
ಈ ಹಿನ್ನೆಲೆಯಲ್ಲಿ ಚಿತ್ರದ ವಿಜಯೋತ್ಸವ ಆಚರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನಟ ಸೂರ್ಯ ಮಾತನಾಡುತ್ತಾ, ಈ ಸಿನಿಮಾ ನನ್ನ ಪಾಲಿಗೆ ವಿಶೇಷ. ಯಾಕೆಂದರೆ ಬಿಡುಗಡೆ ದಿನಾಂಕ ಸಾಕಷ್ಟು ಸಲ ಬದಲಾಗಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ನಮ್ಮ ಕೈಯಲ್ಲಿಲ್ಲ. ನಾನು ತುಂಬಾ ಆತಂಕಕ್ಕೊಳಗಾಗಿದ್ದೆ...
 
ಆದರೆ ಪ್ರೇಕ್ಷಕರು ಚಿತ್ರವನ್ನು ಕೈಬಿಡಲಿಲ್ಲ. ದಕ್ಷಿಣದಲ್ಲಿ ವರ್ಷಕ್ಕೆ ಸುಮಾರು ಸಾವಿರಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗುತ್ತವೆ. ಅವುಗಳಲ್ಲಿ ಶೇ.7ರಷ್ಟು ಮಾತ್ರ ಗೆಲ್ಲುತ್ತವೆ. ಹಾಗಾಗಿ ಪ್ರತಿ ನಟನಿಗೂ ಹಿಟ್ ಎಂಬುದು ಬಹಳ ಮುಖ್ಯ. ಇದಕ್ಕಿಂತಲೂ ಖುಷಿಯ ಸಂಗತಿ ಇನ್ನೇನಿಲ್ಲ... 
 
ಈ ಚಿತ್ರಕ್ಕಾಗಿ ನಿರ್ದೇಶಕ ಹರಿ ತುಂಬಾ ಬೆವರರಿಸಿದ್ದಾರೆ. ಅವರೊಂದಿಗೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಸಿಂಗಂ ಸರಣಿ ಮುಂದುವರೆಸುವ ಸಾಧ್ಯತೆಗಳಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿಂಗಂ 4 ಮಾಡುತ್ತೇನೆ ಎಂದಿದ್ದಾರೆ. ಆದರೆ ಅದಕ್ಕೆ ಐದಾರು ವರ್ಷಗಳ ಕಾಲ ಹಿಡಿಸಬಹುದು ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ದರ್ಶನ್ ಆಂಡ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

ಏನೂ ಆಗಲ್ಲ ಬಾಸ್, ನಿಮ್ಮೊಂದಿಗೆ ನಾವಿದ್ದೇವೆ: ಡಿಬಾಸ್ ಗೆ ಫ್ಯಾನ್ಸ್ ಫುಲ್ ಸಪೋರ್ಟ್

ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ಮುಂದಿನ ಸುದ್ದಿ
Show comments