Webdunia - Bharat's app for daily news and videos

Install App

ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾದ ನಟ ಸುಮಂತ್ ಶೈಲೇಂದ್ರ

Webdunia
ಮಂಗಳವಾರ, 27 ನವೆಂಬರ್ 2018 (07:36 IST)
ಬೆಂಗಳೂರು : ಸ್ಯಾಂಡಲ್‍ವುಡ್ ನ ‘ದಿಲ್‍ವಾಲಾ’ ಚಿತ್ರದ  ನಟ ಸುಮಂತ್ ಶೈಲೇಂದ್ರ  ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.


ಹೌದು. ವಿಶೇಷವೆಂದರೆ ಸ್ಯಾಂಡಲ್‍ವುಡ್ ಮತ್ತೊಬ್ಬ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಮದುವೆಯಾಗಲಿರುವ ಡಿಸೆಂಬರ್ 12ರಂದೇ ನಟ ಸುಮಂತ್ ಶೈಲೇಂದ್ರ ಕೂಡ ಹಸೆಮಣೆ ಏರಲಿದ್ದಾರಂತೆ.


ನಟ ಸುಮಂತ್ ಶೈಲೇಂದ್ರ ಅವರು ಅನಿತಾ ಎಂಬುವವರ ಜೊತೆ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 11ರಂದು ಬೆಂಗಳೂರು ಪ್ಯಾಲೇಸ್‍ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸದ್ಯ ಸುಮಂತ್ ಅವರು ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.


‘ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾದ ಸುಮಂತ್, ಆ ನಂತರ ರಾಧಿಕಾ ಪಂಡಿತ್ ಅವರ ಜೊತೆ ‘ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ ‘ತಿರುಪತಿ ಎಕ್ಸಪ್ರೆಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

ಮುಂದಿನ ಸುದ್ದಿ
Show comments