ನನ್ನವರೇ ನನ್ನನ್ನು ತುಳಿಯುತ್ತಿದ್ದಾರೆ: ಸಿನಿಮಾಗೆ ಗುಡ್ ಬೈ ಹೇಳಿದ ಜೆಕೆ ಮಾತು

Webdunia
ಶನಿವಾರ, 3 ಜೂನ್ 2023 (08:20 IST)
ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಸಿನಿಮಾ ರಂಗಕ್ಕೇ ಗುಡ್ ಬೈ ಹೇಳುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಅವಕಾಶಗಳ ಕೊರತೆ.

ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆ ಆಗಿ ಖ್ಯಾತಿ ಪಡೆದ ಅವರು ಬಳಿಕ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅಲ್ಲದೆ ಹಿಂದಿ ಧಾರವಾಹಿಯಲ್ಲೂ  ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಈಗ ತಮ್ಮವರೇ ತಮ್ಮನ್ನು ಬೆಳೆಯಲು ಬಿಡುತ್ತಿಲ್ಲ ಎಂದು ನೋವಿನಿಂದ ಜೆಕೆ ಸಿನಿಮಾ ರಂಗಕ್ಕೇ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾರೆ. ಕೆಲವು ದಿನಗಳ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದರು. ಆದರೆ ಬಳಿಕ ಗೆಳೆಯರು, ಫ್ಯಾನ್ಸ್ ಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಡಿಲೀಟ್ ಮಾಡಿದ್ದರು.

ಆದರೆ ಈಗ ಮಾಧ‍್ಯಮಗಳ ಮುಂದೆಯೇ ತಾವು ಸಿನಿಮಾ ರಂಗದಿಂದ ದೂರವಾಗಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ. ಹಿಂದಿಯಲ್ಲಿ ಸಾಕಷ್ಟು ಅವಕಾಶವಿದ್ದರೂ ಕನ್ನಡದ ಮೇಲಿನ ಪ್ರೀತಿಗಾಗಿ ಇಲ್ಲಿಯೇ ಉಳಿದೆ. ಆದರೆ ಇಲ್ಲಿ ನನ್ನನ್ನು ನಮ್ಮವರೇ ತುಳಿಯುತ್ತಿದ್ದಾರೆ. ಬೆಳೆಯಲು ಬಿಡುತ್ತಿಲ್ಲ. ಗೌರವ ಇಲ್ಲದ ಕಡೆ ಇರಬಾರದು. ನನಗೆ ಅವರ ಮೇಲೆ ಧ್ವೇಷ ಸಾಧಿಸಲು ಗೊತ್ತಿಲ್ಲ. ಮೊದಲೆಲ್ಲಾ ಹೆಸರು ಗಳಿಸಬೇಕು ಎಂದು ಹಾತೊರೆಯುತ್ತಿದ್ದೆ. ಆದರೆ ಈಗ ಹಣ ಗಳಿಸಲು ಮಾರ್ಗವಿದ್ದರೆ ಸಾಕು ಎನಿಸಿದೆ. ಹೀಗಾಗಿ ಇದಕ್ಕೆ ಬೇರೆ ದಾರಿಗಳಿವೆ. ಸಿನಿಮಾವೇ ಆಗಬೇಕೆಂದೇನಿಲ್ಲ. ಹಾಗಾಗಿ ಚೆನ್ನಾಗಿದ್ದಾಗಲೇ ಇಂಡಸ್ಟ್ರಿ ಬಿಡುವ ತೀರ್ಮಾನ ಮಾಡಿದ್ದೇನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments