Select Your Language

Notifications

webdunia
webdunia
webdunia
webdunia

ನಟ ಗೋಲ್ಡನ್ ಸ್ಟಾರ್ ಗಣೇಶ್ -ಶಿಲ್ಪಾ ದಂಪತಿಗೆ ಗಂಡುಮಗು

ನಟ ಗೋಲ್ಡನ್ ಸ್ಟಾರ್ ಗಣೇಶ್ -ಶಿಲ್ಪಾ ದಂಪತಿಗೆ ಗಂಡುಮಗು
ಬೆಂಗಳೂರು , ಗುರುವಾರ, 27 ಆಗಸ್ಟ್ 2015 (17:08 IST)
ಸ್ಯಾಂಡಲ್‌ವುಡ್ ನಟ ಗಣೇಶ್‌-ಶಿಲ್ಪಾ ದಂಪತಿಗೆ ಗಂಡು ಮಗುವಾಗಿದೆ ಎಂದು ಗಣೇಶ್ ಕುಟುಂಬದ ಮೂಲಗಳು ತಿಳಿಸಿವೆ 
ಇಂದು ಜಯನಗರದ ಕ್ಲೌಡ್ ಆಸ್ಪತ್ರೆಯಲ್ಲಿ ಶಿಲ್ಪಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟ ಗಣೇಶ್ ಅವರು ಸದ್ಯ ಯಲ್ಲಾಪುರ ಸಮೀಪ 'ಮುಂಗಾರು ಮಳೆ-2' ಚಲನಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇದರಿಂದಾಗಿ ಚಿತ್ರೀಕರಣದ ಸ್ಥಳದಲ್ಲಿ ಸಂತಸದ ವಾತಾವರಣ ಮನೆಮಾಡಿದೆ.
 
ಗೋಲ್ಡನ್ ಸ್ಟಾರ್ ಗಣೇಶ್ 'ಮುಂಗಾರು ಮಳೆ-2' ಚಲನಚಿತ್ರದ ಚಿತ್ರೀಕರಣದಲ್ಲಿದ್ದು, ಗಣೇಶ್ ಅವರಿಗೊಂದು ಸಿಹಿ ಸುದ್ದಿ ಸಿಕ್ಕಿದಂತಾಗಿದೆ. 
 
ಗಣೇಶ್ ಅವರ ಮೊದಲನೇ ಮಗು ಹೆಣ್ಣಾಗಿದ್ದು ಯುಗಾದಿ ಹಬ್ಬದಂದು ಜನಿಸಿತ್ತು. ಈಗ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಗಂಡು ಮಗು ಜನಿಸಿದ್ದು ಗಣೇಶ್ ಅವರು ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದಾರೆ.

Share this Story:

Follow Webdunia kannada