Webdunia - Bharat's app for daily news and videos

Install App

ಚೇತನ್ ಅಹಿಂಸಾ ವೀಸಾ ರದ್ದು: ಆಕ್ರೋಶ ವ್ಯಕ್ತಪಡಿಸಿದ ನಟ

Webdunia
ಶನಿವಾರ, 15 ಏಪ್ರಿಲ್ 2023 (16:38 IST)
ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರ ವೀಸಾ ಕೇಂದ್ರ ಗೃಹ ಇಲಾಖೆ ರದ್ದು ಮಾಡಿದೆ.

ನಟ ಚೇತನ್ ಮೂಲತಃ ಅಮೆರಿಕಾ ಪ್ರಜೆ. ಇಲ್ಲಿ ವೀಸಾ ಪಡೆದು ನೆಲೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳಿಂದ ಬಂಧನಕ್ಕೊಳಗಾಗಿದ್ದರು. ಇದೀಗ ಗೃಹ ಇಲಾಖೆ ಅವರ ವೀಸಾ ಮತ್ತು ಓವರ್ ಸೀಸ್ ಸಿಟಿಜೆನ್ ಶಿಪ್ ಆಫ್‍ ಇಂಡಿಯಾವನ್ನು ರದ್ದುಗೊಳಿಸಿದೆ.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್, ಕೇಂದ್ರ ಸರ್ಕಾರ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಚೇತನ್ ಗಾಂಜಾವನ್ನು ಅಧಿಕೃತ ಬೆಳೆಯಾಗಿಸಬೇಕು ಎಂದು ವಿವಾದ ಸೃಷ್ಟಿಸಿದ್ದರು. ಅದರ ಬೆನ್ನಲ್ಲೇ ತಿರುಪತಿ ದೇವಾಲಯ ಬೌದ್ಧ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದಿದ್ದರು. ಇಂತಹ ಹೇಳಿಕೆಗಳಿಂದಲೇ ಅವರು ವಿವಾದಕ್ಕೀಡಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಕಾಂತಾರ ಚಾಪ್ಟರ್ 1 ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ

ಟಿವಿಕೆ ರಾಲಿಯಲ್ಲಿ ಕಾಲ್ತುಳಿತ: ವಿಜಯ್ ಫ್ಯಾನ್ಸ್ ದೂರುತ್ತಿರುವುದು ಈಗ ಇವರನ್ನೇ

BIG BOSS: ಬಿಗ್‌ಬಾಸ್ ಮನೆಯಲ್ಲಿ‌ ಎರಡೆರಡೂ ಕಂಡು ಶಾಕ್ ಆದ ಕಿಚ್ಚ ಸುದೀಪ್

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

ಮುಂದಿನ ಸುದ್ದಿ
Show comments