ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕೆ ಬೇಡಿಕೆ: ನಟ ಚರಿತ್ ಬಾಳಪ್ಪ ಅರೆಸ್ಟ್‌

Sampriya
ಭಾನುವಾರ, 16 ಫೆಬ್ರವರಿ 2025 (12:52 IST)
Photo Courtesy X
ಬೆಂಗಳೂರು:  ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪದಡಿಯಲ್ಲಿ  ಸೀರಿಯಲ್ ನಟ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಚರಿತ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇವರು ಕನ್ನಡದಲ್ಲಿ ಮುದ್ದುಲಕ್ಷ್ಮಿ ಸೀರಿಯಲ್ ಸೇರಿದಂತೆ ತೆಲುಗು ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ. ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ವಾಸವಿದ್ದ ಮನೆಗೆ ನುಗ್ಗಿ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ.  ದೂರು ಆಧರಿಸಿ ಪೊಲೀಸರು ನಟನನ್ನು ಬಂದಿದ್ದಾರೆ.

ಯುವತಿಗೆ ಲೈಂಗಿಕ ದೌರ್ಜನ್ಯ ಎಸಗುವುದಲ್ಲದೆ ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ ಎಂದು ಚರಿತ್ ಬಾಳಪ್ಪ ವಿರುದ್ಧ ಆರೋಪ ಮಾಡಲಾಗಿದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಎಲ್ಲ ದೂರುಗಳನ್ನು ಆಧರಿಸಿ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಹಲ್ಲೆ ಮುಂತಾದ ಕೇಸ್ ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪತ್ನಿಯಿಂದ ಚರಿತ್ ಬಾಳಪ್ಪ ಡಿವೋರ್ಸ್ ಪಡೆದಿದ್ದಾರೆ. ಈ ಹಿಂದೆ ಚರಿತ್ ಬಾಳಪ್ಪ ವಿರುದ್ದವೇ ಪತ್ನಿ ಮಂಜುಶ್ರೀ ಕೂಡ ದೂರು ನೀಡಿದ್ದರು.

ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಪತ್ನಿಗೆ ಚರಿತ್ ಬಾಳಪ್ಪ ಬೆದರಿಕೆ ಹಾಕಿದ್ದರು. ಆ ಕುರಿತು 2024ರ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ಎನ್​ಸಿಆರ್​ ದಾಖಲಾಗಿತ್ತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ