Select Your Language

Notifications

webdunia
webdunia
webdunia
webdunia

ನಟನೆ ಹುಟ್ಟಿನಿಂದ ಬರುವಂತದ್ದು.. ಶಾಲೆಯಲ್ಲಿ ಕಲಿಯುವುದರಿಂದ ಅಲ್ಲವೇ ಅಲ್ಲ: ದೀಪಿಕಾ

ನಟನೆ ಹುಟ್ಟಿನಿಂದ ಬರುವಂತದ್ದು.. ಶಾಲೆಯಲ್ಲಿ ಕಲಿಯುವುದರಿಂದ ಅಲ್ಲವೇ ಅಲ್ಲ: ದೀಪಿಕಾ
, ಮಂಗಳವಾರ, 21 ಅಕ್ಟೋಬರ್ 2014 (13:10 IST)
ಕರಾವಳಿ ಸುಂದರಿ ದೀಪಿಕ ಪಡುಕೋಣೆ ಬಾಲಿವುಡ್ ನ ಹಾಟ್ ಫೇವರೆಟ್ ನಟಿಯಾಗಿದ್ದಾಳೆ. ಆಕೆಯು ಈಗ ತನ್ನ ಹೊಸ ಚಿತ್ರ ಹ್ಯಾಪಿ ನ್ಯೂ ಇಯರ್ ಬಿಡುಗಡೆಯತ್ತ ಗಮನ ನೆಟ್ಟಿದ್ದಾಳೆ. ಆ ಚಿತ್ರದ ಪ್ರಮೋಶನ್ ಗೆಂದು ಸಾಕಷ್ಟು ಕೆಲಸ ಮಾಡುತ್ತಾ ಇದ್ದಾಳೆ. ಈ ಮಧ್ಯೆ ಆಕೆ ತಾನು ಯಾವ ರೀತಿ ಅಭಿನಯ ಕಲಿತೆ ಎನ್ನುವುದನ್ನು ಜನರ ಮುಂದೆ ಇಟ್ಟಿದ್ದಾಳೆ.
 
ಅಲ್ಲದೆ ಡಿಪ್ಪಿ ಹೇಳಿರೋದು ನಟನಾ ಶೈಲಿಯು ಕಲಿಕೆಯಿಂದ   ಬರುವಂತಹದಲ್ಲ, ಅದು  ನಮ್ಮಲ್ಲೇ ಆ ಭಾವಗಳು ಹುಟ್ಟ ಬೇಕು. ತಾನು ನಟನೆಯ ಬಗ್ಗೆ ಹೆಚ್ಚು ಅರಿತಿದ್ದು ಬೇರೆಯವರು ಮಾಡುವ ಅಭಿನಯವನ್ನು ವೀಕ್ಷಿಸುತ್ತ, ಅವರ ಪ್ರತಿಯೊಂದು ಅಂಶವನ್ನು ಗಮನಿಸುತ್ತಾ ಮನದಟ್ಟು ಮಾಡಿಕೊಂಡೆ  ಎಂದು ಈ ಸಮಯದಲ್ಲಿ ಹೇಳಿದ್ದಾಳೆ. 
 
ದೀಪಿಕ ತನ್ನ ಕೆರಿಯರ್ ಆರಂಭಿಕ ದಿನಗಳಲ್ಲಿ ಅನುಪಮ್ ಖೇರ್ ಅವರ ನಟನ ಶಾಲೆಯಲ್ಲಿ ಕಲಿಕೆ ಮಾಡಿ , ಅಲ್ಲಿ ಅವರಿಂದ ಪ್ರತಿಭಾವಂತೆ ಎಂದು ಹೊಗಳಿಸಿ ಕೊಂಡಿದ್ದಳಂತೆ. ಒಟ್ಟಾರೆ ಓಂ ಶಾಂತಿ ಓಂ ನಿಂದ ಬಾಲಿವುಡ್ಗೆ ಜಿಗಿದ ಈ ಕನ್ನಡದ ಹುಡುಗಿ ಈಗ ಈ ಪರಿ ಬೆಳೆದಿರುವುದು ಸಂತೋಷ ಪಡುವ ಸಂಗತಿ.  ಹ್ಯಾಪಿ ನ್ಯೂ ಇಯರ್  ಮುಂಬರುವ ಶುಕ್ರವಾರ ಅಂದರೆ ದೀಪಾವಳಿಯ ದಿನದಂದು ಬಿಡುಗಡೆ ಆಗಲಿದೆ. 
 

Share this Story:

Follow Webdunia kannada