Select Your Language

Notifications

webdunia
webdunia
webdunia
webdunia

ನೂರು ಕೋಟಿ ಕ್ಲಬ್ ತಲುಪುವ ಹಾದಿಯಲ್ಲಿ ಎಬಿಸಿಡಿ 2

ನೂರು ಕೋಟಿ ಕ್ಲಬ್ ತಲುಪುವ ಹಾದಿಯಲ್ಲಿ ಎಬಿಸಿಡಿ 2
, ಶುಕ್ರವಾರ, 3 ಜುಲೈ 2015 (11:00 IST)
ನಟ ಶಕ್ತಿ ಕಪೂರ್ ಅವರ  ಮುದ್ದಿನ ಮಗಳು ಶ್ರದ್ಧಾ ಕಪೂರ್ ಈಗ ಬಾಲಿವುಡ್ ಚಿತ್ರರಂಗದ ಭರವಸೆಯ ನಟಿಯಾಗಿದ್ದಾರೆ. ಅವರ ನಟನೆಯ ಆಶಿಕಿ2 ಮತ್ತು ಏಕ್ ವಿಲನ್ ಚಿತ್ರಗಳು ಬಾಕ್ಸಾಫೀಸಲ್ಲಿ ನೂರು ಕೋಟಿರೂಪಾಯಿಗಳನ್ನು ಗಳಿಕೆ ಮಾಡಿತ್ತು.  ಈಗ ಆಕೆಯ ಎಬಿಸಿಡಿ 2 ಚಿತ್ರವೂ ಸಹಿತ ಅದೇ ಹಾದಿಯಲ್ಲಿ ಸಾಗಿದೆ. 
ಈ ಚಿತ್ರವನ್ನು ಕೊರಿಯಾಗ್ರಾಫರ್ ಆಗಿ ಚಿತ್ರರಂಗದಲ್ಲಿ ಸ್ಥಾನ ಪಡೆದು ಈಗ ನಿರ್ದೇಶಕರಾಗಿ ಅಲ್ಲಿಯೂ ಗೆಲುವು ಸಾಧಿಸಿರುವ ರೆಮೋ ಡಿಸೋಜ ಅವರು ನಿರ್ದೇಶನ ಮಾಡಿದ್ದಾರೆ.ಈ ಚಿತ್ರ ಜೂನ್ 19  ಬಿಡುಗಡೆ ಆಯಿತು. ಈಗ ಅದು ಕೋಟಿಗಳಷ್ಟು ಬುಧವಾರ ಗಳಿಕೆ ಮಾಡಿದೆ ಎಂದು ಅದು ನೂರು ಕೋಟಿ ಕ್ಲಬ್ ನ್ನು  ಈ ವಾರದ ಕೊನೆಯಲ್ಲಿ ತಲುಪವ ಬಗ್ಗೆ ಹೇಳಿದ್ದಾರೆ ರೇಮೋ ಅವರು. 
 
2013 ರಲ್ಲಿ ಎಬಿಸಿಡಿ ಎನಿಬಡಿ ಕ್ಯಾನ್ ಡ್ಯಾನ್ಸ್ ಚಿತ್ರ ಬಿಡುಗಡೆ ಆಗಿತ್ತು. ಅದರಲ್ಲಿ ವರುಣ್ ಧವನ್, ಪ್ರಭುದೇವ ಮತ್ತು ಲೌರೆನ್  ಅವರು ನಟಿಸಿದ್ದರು. ಆ ಚಿತ್ರವೂ ಎಲ್ಲರ ಮನ ಹಾಗೂ ಗಮನ ಸೆಳೆದಿತ್ತು. ಈಗ ಎಬಿಸಿಡಿ 2 ಸಹ ಗೆಲುವನ್ನು ಸಾಧಿಸಿದೆ. ಪ್ರಸ್ತುತ ಶ್ರದ್ಧಾ ಅವರ ಮುಂದಿನ ಚಿತ್ರ ರಾಕ್ ಆನ್ 2  ಮತ್ತು ಬಾಗಿ ಬಿಡುಗಡೆ ಕಾಯುತ್ತಿದ್ದು, ಅವುಗಳು ಯಾವರೀತಿ ಶ್ರದ್ಧಾಗೆ ಅದೃಷ್ಟ ತಂದು ಕೊಡುತ್ತದೆಯೋ ಕಾಯುವ! 

Share this Story:

Follow Webdunia kannada