Select Your Language

Notifications

webdunia
webdunia
webdunia
webdunia

ನಟನಾಗುವ ಸೂಚನೆ ಕೊಡ್ತಿದ್ದಾನೆ ಅಬ್ ರಾಮ್

ನಟನಾಗುವ ಸೂಚನೆ ಕೊಡ್ತಿದ್ದಾನೆ ಅಬ್ ರಾಮ್
, ಮಂಗಳವಾರ, 13 ಅಕ್ಟೋಬರ್ 2015 (11:08 IST)
ಬೆಳೆಯುವ ಸಿರಿಮೊಳಕೆಯಲ್ಲೇ ಅನ್ನೋ ಮಾತಿದೆ. ಈ ಮಾತು  ಶಾರುಖ್ ಖಾನ್ ಕಿರಿಯ ಪುತ್ರ ಅಬ್ ರಾಮ್ ಖಾನ್ ಗೆ ಚೆನ್ನಾಗಿಯೇ ಒಪ್ಪುತ್ತೆ.  ಅಪ್ಪನ ನ್ಯೂ ಇಯರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಬ್ ರಾಮ್ ಗೆ ಎಲ್ಲೆಡೆ ಪ್ರಶಂಸೆಗಳು ಕೇಳಿ ಬಂದಿದ್ದವು. ಆದ್ರೀಗ ಮತ್ತೆ ಕ್ಯೂಟ್ ಅಬ್ ರಾಮ್ ಸುದ್ದಿಯಾಗಿದ್ದಾನೆ.
ಇಷ್ಟು ಅಬ್ ರಾಮ್ ಮತ್ತೆ ಸುದ್ದಿಯಾಗೋಕೆ ಅಪ್ಪ ಶಾರುಖ್ ಟ್ವಿಟರ್ ನಲ್ಲಿ ಶೇರ್ ಮಾಡಿರುವ ಅಬ್ ರಾಮ್ ವಿಡಿಯೋ. ವಿಡಿಯೋದಲ್ಲಿ ಅಬ್ ರಾಮ್ ನೃತ್ಯ ಮಾಡುತ್ತಿದ್ದಾನೆ. ಅಷ್ಟಕ್ಕೂ ಆಗಿದ್ದೇನೆಂದ್ರೆ ದಿಲ್ ವಾಲೇ ಸಿನಿಮಾದ ಶೂಟಿಂಗ್ ವೇಳೆ ಶಾರುಖ್ ಖಾನ್ ಸ್ಫೋರ್ಟ್ ಕಾರೊಂದನ್ನು ಚಲಾಯಿಸುತ್ತಿದ್ದರು. ಈ ವೇಳೆ ಹಿಂದೆ ಕುಳಿತಿದ್ದ ಅಬ್ ರಾಮ್ ಡ್ಯಾನ್ಸ್ ಮಾಡುತ್ತಿದ್ದ. ಇದೇ ವಿಡಿಯೋವನ್ನು ಕಿಂಗ್ ಖಾನ್ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 
ವಿಡಿಯೋದಲ್ಲಿ ಅಬ್ ರಾಮ್ ತುಂಬಾ ಮುದ್ದಾಗಿ ಕಾಣುತ್ತಿದ್ದಾನೆ. ಅಬ್ ರಾಮ್ ಸದ್ಯದ ಚಟುವಟಿಕೆ ನೋಡುತ್ತಿದ್ರೆ ಆತ ಸಿನಿಮಾ ರಂಗಕ್ಕೆ ಎಂಟ್ರಿ ಕೋಡೋ ಲಕ್ಷಣಗಳು ಕಾಣುತ್ತಿವೆ.ಅಬಿಮಾನಿಗಳು ಕೂಡ ಇದೇ ಮಾತುಗಳನ್ನು ಹೇಳುತ್ತಿದ್ದಾರೆ.

Share this Story:

Follow Webdunia kannada