Select Your Language

Notifications

webdunia
webdunia
webdunia
webdunia

ಹೊಸ ದಾಖಲೆ ಬರೆದ ಆಟಗಾರ ಸಿನಿಮಾ

ಹೊಸ ದಾಖಲೆ ಬರೆದ ಆಟಗಾರ ಸಿನಿಮಾ
, ಗುರುವಾರ, 26 ನವೆಂಬರ್ 2015 (10:20 IST)
ಆಗಸ್ಟ್‌ನಲ್ಲಿ ರಿಲೀಸ್ ಆಗಿದ್ದ ದ್ವಾರಕೀಶ್ ನಿರ್ಮಾಣದ 49ನೇ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ರಿಯಾಲಿಟಿ ಶೋವೊಂದರ ಕಥಾಹಂದರ ಹೊಂದಿದ್ದ ಈ ಸಿನಿಮಾಕ್ಕೆ ಅಭಿಮಾನಿಗಳು ಕೂಡ ಜೈ ಅಂದಿದ್ದರು. ಭರ್ಜರಿಯಾಗಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಇದೀಗ ಹೊಸ ದಾಖಲೆಯನ್ನು ನಿರ್ಮಿಸಿದೆ.

ಆಟಗಾರ ಸಿನಿಮಾ ಗಲ್ಫ್ ದೇಶದಲ್ಲಿ ಪ್ರದರ್ಶನವಾಗುವ ಮೂಲಕ ವಿದೇಶದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿದೆ. ಸಿನಿಮಾಕ್ಕೆ ಅಲ್ಲಿರುವ ನಮ್ಮ ಕನ್ನಡಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.ಆ ಮೂಲಕ ರಂಗಿತರಂಗ ಸಿನಿಮಾದಂತೆ ವಿದೇಶದಲ್ಲೂ  ಸದ್ದು ಮಾಡುತ್ತಿರುವ ಸಿನಿಮಾಗಳ ಸಾಲಿಗೆ ಆಟಗಾರ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸಿನಿಮಾಕ್ಕೆ ಉತ್ತಮ ಗಲ್ಫ್ ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಇದರಿಂದಾಗಿ ಬೇರೆ ದೇಶಗಳಲ್ಲೂ ಸಿನಿಮಾ ಪ್ರದರ್ಶನ ಕಂಡ್ರೆ ಅಚ್ಚರಿಯಿಲ್ಲ. 
 
ಆಟಗಾರ ಸಿನಿಮಾದ ಪ್ರಮುಖ ಆಕರ್ಷಣೆ ಅದರ ತಾರಾಗಣ. ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ, ಹೀಗೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಇನ್ನು ಈ ಸಿನಿಮಾಕ್ಕೆ ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.

Share this Story:

Follow Webdunia kannada