Select Your Language

Notifications

webdunia
webdunia
webdunia
webdunia

ದಿಗಂತ್ ಚಿತ್ರದಲ್ಲಿ ಐದು ಸಂಗೀತ ನಿರ್ದೇಶಕರಿಂದ ಸಂಗೀತ ಸಂಯೋಜನೆ

ದಿಗಂತ್ ಚಿತ್ರದಲ್ಲಿ ಐದು ಸಂಗೀತ ನಿರ್ದೇಶಕರಿಂದ ಸಂಗೀತ ಸಂಯೋಜನೆ
, ಗುರುವಾರ, 16 ಏಪ್ರಿಲ್ 2015 (11:35 IST)
ಮೂರು ಸಂಗೀತ ನಿರ್ದೇಶಕರ ಸಂಗೀತ ನಿರ್ದೇಶನದ ಮೂಲಕ ನಟ ವಿನೋದ್ ಪ್ರಭಾಕರ್ ಅವರ ಚಿತ್ರ ಟೈಸನ್ ಅಧಿಕ ಪ್ರಮಾಣದಲ್ಲಿ ಸುದ್ದಿ ಮಾಡಿತ್ತು. ಈಗ ಅದೇ ರೀತಿ ಮತ್ತೊಂದು ಚಿತ್ರವು  ಸದ್ದು ಮಾಡುತ್ತಿದೆ. ಆ ಚಿತ್ರದ ಹೆಸರು ಹಿಟ್ ವಿಕೆಟ್. ಆ ಚಿತ್ರದಲ್ಲಿ  ದಿಗಂತ್ ಮುಖ್ಯಪಾತ್ರಧಾರಿಯಾಗಿದ್ದಾರೆ. 
 
ಶಾರ್ಪ್ ಶೂಟರ್ ಮತ್ತು ಪ್ರಪಂಚ ಚಿತ್ರಗಳಲ್ಲಿನ ನಟನೆಯ ನಂತರ ಈಗ ಅತಿ ಹೆಚ್ಚು ಬ್ಯುಸಿಯಾಗಿರುವ ಚಿತ್ರ ಹಿಟ್ ವಿಕೆಟ್. ಈ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನು ಸಂದೀಪ್ ಗೌಡ ಅವರು ಹೊತ್ತಿದ್ದಾರೆ. ಈ ಮೊದಲು ಸಂದೀಪ್ ಗೌಡ ಅವರು ದಿಗಂತ್ ಅಭಿನಯದ ಬಿಸಿಲೆ ಚಿತ್ರವನ್ನು ನಿರ್ದೇಶನ ಮಾಡಿದ್ದರು.ರೈನ್ ಕೋಟ್ ಚಿತ್ರದಲ್ಲಿ  ನಟಿಸಿದ್ದ ಅಪೂರ್ವ ರೈ ಈ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದಾಳೆ. ಅನಂತ್ ನಾಗ್ ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಸಂಗೀತವನ್ನು ಮಿಥುನ್, ಗಗನ್, ವಿವೇಕ್, ಅಭಿಮಾನ್ ಮತ್ತು ಜುದ ಅವರು ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada