Webdunia - Bharat's app for daily news and videos

Install App

1 ತಿಂಗಳಲ್ಲಿ 14 ಚಿತ್ರ

Webdunia
ಶನಿವಾರ, 31 ಜನವರಿ 2009 (19:26 IST)
2009 ರಲ್ಲೂ ಚಿತ್ರರಂಗದಲ್ಲಿ ಭರ್ಜರಿ ಚಿತ್ರಗಳು ತೆರೆ ಕಾಣುತ್ತಿದೆ. ಜನವರಿಯಲ್ಲಿ ಒಟ್ಟು 14 ಚಿತ್ರಗಳು ತೆರೆಕಂಡಿವೆ. ಆದರೆ ಒಂದು ಕಾಲದಲ್ಲಿ 6 ತಿಂಗಳಾದರೂ 15 ಚಿತ್ರಗಳು ಕೂಡಾ ಬಿಡುಗಡೆಯಾಗುತ್ತಿರಲಿಲ್ಲ. ಈ ವಾರ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಅಂಬಾರಿ, ಮೇಘವೇ ಮೇಘವೇ ಹಾಗೂ ಚಂದ್ರಗಿರಿಯ ರಹಸ್ಯ.

ಮೇಘವೇ ಮೇಘವೇ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ನಂದ ನಂದಿತದ ನಂತರ ಯೋಗೀಶ್ ನಾಯಕನಾಗಿ ನಟಿಸಿದ ಎರಡನೇ ಚಿತ್ರ ಅಂಬಾರಿ ಈ ವಾರ ತೆರೆ ಕಂಡಿದೆ. ಮೇಘವೇ ಮೇಘವೇ ಚಿತ್ರತಂಡ ಕಳೆದ ವರ್ಷ ಹಾರುವ ವಿಮಾನದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಚಿತ್ರತಂಡ ಸುದ್ದಿ ಮಾಡಿತ್ತು. ಆದರೆ ಚಿತ್ರ ಬಿಡುಗಡೆಯಾಗಿದೆ. ಪ್ರೇಕ್ಷಕರು ಥಿಯೇಟರ್‌ನತ್ತ ಧಾವಿಸುತ್ತಿಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

ಜನವರಿಯಲ್ಲಿ ತೆರೆಕಂಡ ಚಿತ್ರಗಳು: ಗುಲಾಮ, ಕೆಂಪ, ಅನು, ಚಿಕ್ಕಪೇಟೆ ಸಾಚಾಗಳು, ಟ್ಯಾಕ್ಸಿ ನಂ. 1, ಸರ್ಕಸ್, ಶಿವಮಣಿ, ಪ್ರಚಂಡರು, ನಂದ, ಜಾಲಿಡೇಸ್, ನನ್ನಮಾತು ಸುಳ್ಳಲ್ಲ, ಅಂಬಾರಿ, ಚಂದ್ರಗಿರಿ ರಹಸ್ಯ ಹಾಗೂ ಮೇಘವೇ ಮೇಘವೇ. ಈ ನಡುವೆ ಜನವರಿಯಲ್ಲಿ ತೆರೆಕಾಣಬೇಕಿದ್ದ ಕೆಲವು ಚಿತ್ರಗಳು ಚಿತ್ರಮಂದಿರ ಸಮಸ್ಯೆಯಿಂದ ಫೆಬ್ರವರಿಯಲ್ಲಿ ತೆರೆಕಾಣುತ್ತಿದೆ. ಅವುಗಳಲ್ಲಿ ನಂಯಜಮಾನ್ರು, ಬಿರುಗಾಳಿ, ವೆಂಕಟ ಇನ್ ಸಂಕಟ, ಐಡ್ಯಾ ಮಾಡ್ಯಾರ ಚಿತ್ರಗಳು ಫೆಬ್ರವರಿಯಲ್ಲಿ ತೆರೆ ಕಾಣುತ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments