Select Your Language

Notifications

webdunia
webdunia
webdunia
webdunia

ಹೌಲ ಹೌಲ ಪಿ.ವಾಸು ಹಾಲಿವುಡ್ ಚಿತ್ರದ ನಿರ್ಮಾಣದತ್ತ !

ಹೌಲ ಹೌಲ ಪಿ.ವಾಸು ಹಾಲಿವುಡ್ ಚಿತ್ರದ ನಿರ್ಮಾಣದತ್ತ !
, ಶುಕ್ರವಾರ, 7 ಫೆಬ್ರವರಿ 2014 (09:55 IST)
PR
ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಪಿ. ವಾಸು, ಅದೇ ನಮ್ಮ ಕನ್ನಡ ಸಿನಿಮಾಗಳನ್ನು ಹೆಚ್ಚು ಜನಪ್ರಿಯ ಮಾಡಿದ ಆಪ್ತ ಮಿತ್ರ ಮತ್ತು ಆಪ್ತ ರಕ್ಷಕದಂತಹ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ಪಿ.ವಾಸು ಈಗ ಭಾರತದ ಎಲ್ಲಾ ವುಡ್ ಜೊತೆಗೆ ಹಾಲಿವುಡ್ ನಲ್ಲೂ ತಮ್ಮ ಪ್ರತಿಭೆ ತೋರಲು ಹೊರಟಿದ್ದಾರೆ. ಎಸ್ ಅವರು ಈಗ ಹಾಲಿವುಡ್ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ.

ಅದಕ್ಕೆ ಪೂರಕವಾದ ಕೆಲಸವನ್ನು ಆರಂಭಿಸಿದ್ದಾರೆ ವಾಸು. ಅವರ ಹೊಸ ಚಿತ್ರದ ಹೆಸರು ಕರ್ರಿ ಇನ್ ಲವ್. ಈ ಚಿತ್ರದಲ್ಲಿ ಸಂಪೂರ್ಣವಾಗಿ ಹಾಲಿವುಡ್ ನಟರೆ ಇದ್ದಾರೆ. ಈ ಚಿತ್ರದ ಕಥೆಯನ್ನು ಅಲ್ಲಿನ ಕಲಾವಿದರಿಗೆ ಹೇಳಲು ಬರೋಬ್ಬರಿ ಒಂದುವರೆ ಗಂಟೆಗಳ ಕಾಲ ತೆಗೆದುಕೊಂಡರಂತೆ ವಾಸುಜಿ. ಅವರ ಕಥೆಗೆ ಅಲ್ಲಿನ ಮಂದಿ ಮನಸೋತರಂತೆ. ಓಕೆ ಅಂದರಂತೆ.

ಚಿತ್ರವನ್ನು ಲಾಸ್ ಏಂಜೆಲೀಸ್ ನಲ್ಲಿ ಶೂಟಿಂಗ್ ಮಾಡಲು ಪ್ಲಾನನ್ನು ಮಾಡಲಾಗಿದೆ. ಮುಖ್ಯವಾಗಿ ಈ ಚಿತ್ರದ ಬಗ್ಗೆ ಇನ್ನು ಅನೇಕ ತಯಾರಿಗಳು ನಡೆಯುತ್ತಿದ್ದು, ರಾಜ್ ತಿಚೆಲ್ವನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಈಗ ವಾಸು ರವಿಚಂದ್ರನ್ ಅವರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿ ಅವರು ಹಾಲಿವುಡ್ ಅಂಗಳಕ್ಕೆ ಹೊರಡುತ್ತಾರೆ. ಹಾಲಿವುಡ್ ನ ನಿಕ್ ನೋಲ್ಟ್ ವೈಗಾಟ್ ಇನ್ನು ಮುಂತಾದವರೂ ಚಿತ್ರದಲ್ಲಿ ಇದ್ದಾರೆ. ಬಾಲಿವುಡ್ ಅನಿಲ್ ಕಪೂರ್ ಮತ್ತು ಸೋನಂ ಕಪೂರ್ ಸಹ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಹೆಚ್ಚಾಗಿದೆ.

Share this Story:

Follow Webdunia kannada