Select Your Language

Notifications

webdunia
webdunia
webdunia
webdunia

ಹಾಟ್ ಹುಡುಗಿ ರಿಷಿಕಾಗೆ ಬೇಕಂತೆ ಐಟಂ ಸಾಂಗು!

ಹಾಟ್ ಹುಡುಗಿ ರಿಷಿಕಾಗೆ ಬೇಕಂತೆ ಐಟಂ ಸಾಂಗು!
SUJENDRA
'ಕಳ್ಳ ಮಳ್ಳ ಸುಳ್ಳ'ದಲ್ಲಿ ರಾಗಿಣಿ ದ್ವಿವೇದಿಯ ತುಪ್ಪಕ್ಕೆ ಬಂದಷ್ಟು ಬೇಡಿಕೆ ರಿಷಿಕಾ ಸಿಂಗ್ ರೊಮ್ಯಾಂಟಿಕ್ ಹಾಡಿಗೆ ಬಂದಿರಲಿಲ್ಲ. ಆರಂಭದಿಂದಲೂ ಬಟ್ಟೆಯ ವಿಚಾರದಲ್ಲಿ ಕೊಂಚ 'ಕಟ್ಟುನಿಟ್ಟನ್ನು' ಅನುಸರಿಸಿಕೊಂಡು ಬಂದಿದ್ದಾಕೆಗೆ ಕೋಪ ತರಿಸಲು ಇದೇ ಸಾಕಾಯ್ತೋ ಏನೋ? ನನಗೂ ಒಂದು ಐಟಂ ಸಾಂಗು ಬೇಕು ಅಂತ ಗಾಂಧಿನಗರಿಯ ನಿರ್ದೇಶಕರ ತಮಟೆ ಕಿವಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪುತ್ರಿ ಹಾಗೂ 'ಡೆಡ್ಲಿ ಸೋಮ' ಆದಿತ್ಯನ ಸಹೋದರಿಯಾಗಿರುವ ರಿಷಿಕಾ ಒಂದು ಬ್ರೇಕ್‌ಗಾಗಿ ಕಾಯುತ್ತಿರುವ ಕನ್ನಡತಿ. ಸಿಕ್ಕ ಅವಕಾಶಗಳನ್ನು ಬಾಚಿಕೊಂಡು ಬಿಚ್ಚಮ್ಮಳಾದರೂ ಯಾಕೋ ಬೇಡಿಕೆ ಮಾತ್ರ ಹೆಚ್ಚುತ್ತಿಲ್ಲ. ತಾನು ನಟಿಸಿದ ಚಿತ್ರ ಹಿಟ್ಟಾದರೂ ಗುರುತಿಸುವವರು ಕಾಣುತ್ತಿಲ್ಲ.

ಬಹುತಾರಾಗಣದ 'ಕಳ್ಳ ಮಳ್ಳ ಸುಳ್ಳ'ದಲ್ಲಿ ನಾಯಕ ವಿಜಯ ರಾಘವೇಂದ್ರ ಜತೆ ಬೀಚ್ ಸಾಂಗೊಂದರಲ್ಲಿ ರಿಷಿಕಾ ಸಿಕ್ಕಾಪಟ್ಟೆ ಹಾಟ್ ಹಾಟಾಗಿ ಕಾಣಿಸಿಕೊಂಡಿದ್ದರು. ಅವರ ಅವತಾರವನ್ನು ನೋಡಿದ ಹಲವರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸಿಂಗ್ ಪುತ್ರಿ ಹೀಗೆಲ್ಲ ಕಾಣಿಸಿಕೊಳ್ಳುವುದಾ ಅಂತ ಅಚ್ಚರಿ ವ್ಯಕ್ತಪಡಿಸಿದ್ದರು.

ಆದರೂ ರಿಷಿಕಾ ದುರಾದೃಷ್ಟ ನೋಡಿ. ಈ ಹಾಡು ಹಿಟ್ಟಾದರೂ, ರಾಗಿಣಿ ತುಪ್ಪದಿಂದಾಗಿ ಗೌಣವಾಗಿತ್ತು. ಅದನ್ನು ಮೀರಿಸುವುದು ಸಾಧ್ಯವಾಗಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತುಪ್ಪದ ಎದುರು ರಿಷಿಕಾರ ಬೋಲ್ಡ್‌ನೆಸ್ ವ್ಯರ್ಥವಾಗಿತ್ತು. ಛೇ ಎಂದು ಮರುಗುವ ಸ್ಥಿತಿಗೆ ರಿಷಿಕಾ ಬಂದು ಬಿಟ್ಟಿದ್ದರು. ಅದೇ ಕಾರಣದಿಂದ ಈಗ ಇನ್ನೊಂದು ಬೋಲ್ಡ್ ಹೆಜ್ಜೆಯಿಡಲು ಮುಂದಾಗಿದ್ದಾರೆ.

ತಾನು ನಟಿಸುವ ಚಿತ್ರದಲ್ಲಾದರೂ ಸರಿ, ತಾನೇ ಪ್ರಮುಖಳಾಗಿರುವ ಐಟಂ ಸಾಂಗೊಂದು ಬೇಕು. ಖಂಡಿತಾ ಎಲ್ಲರೂ ಅಹುದಹುದು ಎಂದು ಮೆಚ್ಚುವಂತೆ ಕುಣಿಯುತ್ತೇನೆ. ಯಾರನ್ನೂ ನಿರಾಸೆ ಮಾಡುವುದಿಲ್ಲ ಎಂದಿದ್ದಾರೆ. ಆ ಮೂಲಕ ತಾನು ಯಾವ ಪಾತ್ರಕ್ಕಾದರೂ ಸಿದ್ಧ, ಅದೆಷ್ಟೇ ಹಾಟಾಗಿರಲಿ, ನಾನಂತೂ ರೆಡಿ ಎಂದ ಸಂದೇಶ ರಿಷಿಕಾರಿಂದ ಬಂದಿದೆ.

ಕಳ್ಳ ಮಳ್ಳ ಸುಳ್ಳದ ನಂತರ ಸಾಕಷ್ಟು ಆಫರುಗಳ ನಿರೀಕ್ಷೆಯಲ್ಲಿದ್ದ ರಿಷಿಕಾಗೆ ಅಷ್ಟೇನೂ ತೃಪ್ತಿಯಾಗಿಲ್ಲ. ಈ ನಡುವೆ ತೆಲುಗು-ಮಲಯಾಳಂಗಳಲ್ಲಿ ಅವಕಾಶಗಳಿಗಾಗಿ ಹುಡುಕಾಟದಲ್ಲಿದ್ದಾರೆ. ಒಂದೆರಡು ಚಿತ್ರಗಳು ಈಗಾಗಲೇ ಸಿಕ್ಕಿವೆ. ಅದರಲ್ಲಿ ಪ್ರಮುಖವಾದುದು, ಪೃಥ್ವಿರಾಜ್ ನಾಯಕರಾಗಿರುವ ಚಿತ್ರ. ಇನ್ನೂ ಕೆಲವು ಮಾತುಕತೆ ಹಂತದಲ್ಲಿವೆ.

ಕನ್ನಡದಲ್ಲಂತೂ ಹೇಳಿಕೊಳ್ಳುವ ಚಿತ್ರಗಳು ಸಿಕ್ಕಿಲ್ಲವಂತೆ. ಹೀಗೆ ಹೇಳಿಕೆ ನೀಡಿರುವುದರಿಂದ ಮುಂದೆ ಹಲವು ನಿರ್ಮಾಪಕರು ರಿಷಿಕಾ ಕಾಲ್‌ಶೀಟ್‌ಗೆ ದುಂಬಾಲು ಬಿದ್ದರೂ ಅಚ್ಚರಿಯಿಲ್ಲ, ಬಿಡಿ!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada