Select Your Language

Notifications

webdunia
webdunia
webdunia
webdunia

ಹಾಟ್ ನಯನ ತಾರಾ ಬರುತ್ತಿದ್ದಾರಂತೆ!

ಹಾಟ್ ನಯನ ತಾರಾ ಬರುತ್ತಿದ್ದಾರಂತೆ!
WD
ದಕ್ಷಿಣದ ಖ್ಯಾತ ನಟಿ ನಯನತಾರಾ ಕನ್ನಡಕ್ಕೆ ಬರುತ್ತಿದ್ದಾರೆ ಎಂಬುದು ಬಹು ದಿನಗಳಿಂದ ಗಾಂಧಿನಗರದಲ್ಲಿ ಚರ್ಚೆಯಲ್ಲಿತ್ತು. ಆದರೆ ಅವರು ಇಲ್ಲಿಗೆ ಬರುವ ಯಾವ ಲಕ್ಷಣಗಳು ಕಾಣಿಸಲಿಲ್ಲ. ಕಾಲಕ್ರಮೇಣ ಚಿತ್ರರಸಿಕರು ಸಹ ಆ ವಿಷಯವನ್ನು ಮರೆತೇಬಿಟ್ಟರು.

ಇತ್ತೀಚಿನ ವಿದ್ಯಾಮಾನಗಳ ಪ್ರಕಾರ ಕನ್ನಡ ಚಿತ್ರದಲ್ಲಿ ನಟಿಸಲು ನಯನತಾರಾ ಬರಲಿದ್ದಾರಂತೆ. ಅದು ರೀಯಲ್ ಸ್ಟಾರ್ ಉಪೇಂದ್ರರಿಗೆ ನಾಯಕಿಯಾಗಿ. ಉಪ್ಪಿಯ ಹೊಸ ಚಿಹ್ನೆಯೇ ಶೀರ್ಷಿಕೆಯಾಗಿರುವ ಚಿತ್ರವೂಂದರಲ್ಲಿ ನಯನ ನಟಿಸುವುದು ಹೆಚ್ಚು ಕಮ್ಮಿ ಖಚಿತವಾಗಿದೆಯಂತೆ.

ಇದೀಗ ಕನ್ನಡ ಚಿತ್ರರಂಗಕ್ಕೆ ಹೊರ ರಾಜ್ಯದ ನಟಿಯರ ಆಗಮನ ಹೆಚ್ಚಾಗುತ್ತಿದೆ. ಹಾಗೆಯೇ ಇದೀಗ ನಯನತಾರಾ ಸರದಿ ಅಷ್ಟೆ.

Share this Story:

Follow Webdunia kannada