Select Your Language

Notifications

webdunia
webdunia
webdunia
webdunia

ಹಳ್ಳಿ ಹೈದ ರಾಜೇಶಂಗೆ ನಾಚಿಕೆ ಸ್ವಲ್ಪ ಜಾಸ್ತಿನೇ

ಹಳ್ಳಿ ಹೈದ ರಾಜೇಶಂಗೆ ನಾಚಿಕೆ ಸ್ವಲ್ಪ ಜಾಸ್ತಿನೇ
ಬೆಂಗಳೂರು , ಶುಕ್ರವಾರ, 19 ಜುಲೈ 2013 (13:22 IST)
PR
PR
ನಿರ್ದೇಶಕ ಆಕ್ಷನ್ ಕಟ್ ಹೇಳಿದರೂ ನಮ್ಮ ಹಳ್ಳಿ ಹೈದ ರಾಜೇಶ ನಟಿಸಲು ತಯಾರಿಲ್ಲ. ಇತ್ತ ನಾಯಕಿಯೂ ಹಿಂದಿ ಮಿಶ್ರಿತ ಇಂಗ್ಲೀಷ್ ಭಾಷೆಯಲ್ಲಿ ಪ್ರೋತ್ಸಾಹ ತುಂಬುತ್ತಿದ್ದರೂ ರಾಜೇಶ ನಾಚಿ ನೀರಾಗುತ್ತಾನೆ.

ಯಾರೀ ರಾಜೇಶ ಎಂದು ಕೇಳಬೇಡಿ. ಹಳ್ಳಿ ಮಂದಿ ಪ್ಯಾಟೆಗ್ ಬಂದ್ರು ರಿಯಾಲಿಟಿ ಶೋನಲ್ಲಿ ವಿಜೇತನಾದ ರಾಜೇಶನಿಗೆ ಸಿನೆಮಾದ ಎಬಿಸಿಡಿ ಗೊತ್ತಿಲ್ಲ. ನಟನೆಯ ಪರಿಭಾಷೆಯೂ ತಿಳಿದಿಲ್ಲ. ಹೀಗಿರುವಾಗ ಸೀನ್ಗೆ ತಕ್ಕಂತೆ ನಟಿಸು ಎಂದರೆ ಅವನು ತಯಾರಾಗುವುದಾದರೂ ಹೇಗೆ. ರಿಯಾಲಿಟಿ ಶೋ ವಿನ್ನರ್ ಎಂಬ ಕಾರಣಕ್ಕೆ ಎರಡು ಚಿತ್ರಗಳ ನಾಯಕ ನಟನಾಗಿ ಆಯ್ಕೆಯಾದವನು ರಾಜೇಶ್.

ಲವ್ ಈಸ್ ಪಾಯಿಸನ್ ಚಿತ್ರದ ಯಾರೋ ಕಾಣೆ ದಿನ ಸಹವಾಸ ಬೇಡುವೆನು, ಪ್ರೇಮ ಬೀದಿಯಲಿ ಸಹಕಾರಿಯಾಗುವೆನು ಚಿತ್ರದ ಹಾಡದು. ಕೃತಕ ಮಳೆಯೊಂದಿಗೆ ಚಿತ್ರೀಕರಣಗೊಳ್ಳುತ್ತಿದೆ. ಈ ಮಳೆಯ ಮಧ್ಯೆಯೇ ಆಕೆ ನಾಯಕಿಯೊಂದಿಗೆ ನಟಿಸುವ ದೃಶ್ಯವದು. ಕೃತಕ ಮಳೆಯೊಂದಿಗೆ ನಾಯಕಿಯನ್ನು ಕಂಡು ರಾಜೇಶ್ ಸಖತ್ ಕನ್ಫ್ಯೂಸ್ ಆಗುತ್ತಾನಂತೆ. ಅವನನ್ನು ಮತ್ತೆ ಮೂಡ್ಗೆ ತರಲು ನೃತ್ಯ ನಿರ್ದೇಶಕ ರಘು, ಸಿನೆಮಾ ನಿರ್ದೇಶಕ ನಂದನ್ ಪ್ರಭು ಹರಸಾಹಸ ಪಡುತ್ತಿದ್ದಾರಂತೆ. ಮೂಡ್ ಇದ್ದರೆ ಮಾತ್ರ ನಟಿಸಲು ಒಪ್ಪುವ ರಾಜೇಶ್ಗೆ ಮಳೆ ಹಾಡು ಸಖತ್ ಕಿರಿಕಿರಿ ಮಾಡಿದೆಯಂತೆ.

Share this Story:

Follow Webdunia kannada