Webdunia - Bharat's app for daily news and videos

Install App

ಹಳೇ ಸಿನೆಮಾವೊಂದಕ್ಕೆ ಈಗ ಬಿಡುಗಡೆಯ ಭಾಗ್ಯ

Webdunia
ಗುರುವಾರ, 31 ಅಕ್ಟೋಬರ್ 2013 (11:04 IST)
PR
ಅಭಿಜಿತ್ ಕನ್ನಡ ಚಿತ್ರಗಳಲ್ಲಿ ನಟಿಸದೆ ಸಖತ್ ಕಾಲವಾಯ್ತಲ್ಲಾ, ಇದ್ಯಾವುದು ಹೊಸ ಪೋಸ್ಟರ್ ಎಂದು ಹುಬ್ಬೇರಿಸದಿರಿ. ಅಭಿಜಿತ್ ಸದ್ಯ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಇದು ಸಖತ್ ಹಳೇ ಸಿನೆಮಾ. ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಅರ್ಚನಾ ಚಿತ್ರದ ನಾಯಕಿ. ಅಭಿಜಿತ್-ಅರ್ಚನಾ ಜೋಡಿ ಹಿಟ್ ಎನಿಸಿಕೊಂಡಿದ್ದ ಕಾಲದಲ್ಲಿ ಸೆಟ್ಟೇರಿದ್ದ ಚಿತ್ರವದು. ಅರ್ಚನಾ ಚಿತ್ರರಂಗಕ್ಕೆ ಗುಡ್ಬೈ ಹೇಳಿ ದಶಕಗಳೇ ಕಳೆದಿವೆ.

ಹಾಗಿರುವಾಗ ಅವರು ನಾಯಕಿಯಾಗಿ ನಟಿಸಿದ ಚಿತ್ರ ಅದೆಷ್ಟು ಹಳೆಯದ್ದಿರಬಹುದು ಎಂದು ಊಹಿಸಿನೋಡಿ. ಅಂತಹ ಚಿತ್ರವೊಂದು ಯಾವುದೇ ಕಾರಣಕ್ಕೆ ಸ್ಥಗಿತಗೊಂಡು ಬಿಡುಗಡೆಯಾಗಿರಲಿಲ್ಲ. ಹೀಗೆ ಕಾರಣಾಂತರಗಳಿಂದ ನಿಂತಿದ್ದ ಚಿತ್ರ ಇತ್ತೀಚೆಗೆ ವಿಜಯ ರೆಕಾರ್ಡೀಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿಯುವುದರೊಂದಿಗೆ ಪೂರ್ಣಗೊಂಡಿದೆ. ಚಿತ್ರಕ್ಕೆ ಕಥೆ. ಸಂಭಾಷಣೆ ನಿರ್ದೇಶನದ ಮಾಡಿದ್ದು ವೈ.ಕೃಷ್ಣಂರಾಜು ವಹಿಸಿಕೊಂಡಿದ್ದಾರೆ. ಶ್ರೀರಂಗ, ಶ್ರೀ ಚಂದ್ರು ಅವರ ಸಾಹಿತ್ಯ ಚಿತ್ರಕ್ಕಿದೆ. ಸಂಪತ್ ಮತ್ತು ಮದನ್ ಹರಿಣಿ ಅವರ ನೃತ್ಯ ನಿದರ್ೇಶನವಿದೆ. ತಾರಾಗಣದಲ್ಲಿ ಥ್ರಿಲ್ಲರ್ ಮಂಜು, ಅಭಿಜಿತ್, ಅರ್ಚನಾ, ಗಾಯತ್ರಿ, ತಾರಾ, ದೊಡ್ಡಣ್ಣ, ಎಂ.ಎಸ್. ಉಮೇಶ್, ಟೆನ್ನಿಸ್ ಕೃಷ್ಣ ಮೊದಲಾದವರು ಚಿತ್ರದಲ್ಲಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments