Select Your Language

Notifications

webdunia
webdunia
webdunia
webdunia

ಸುದೀಪ್, ರಮ್ಯಾ ಬೆಂಗಳೂರಿಗರ ಟಾಪ್ ಡಿಸೈರೇಬಲ್ ಸ್ಟಾರ್‌ಗಳು

ಸುದೀಪ್, ರಮ್ಯಾ ಬೆಂಗಳೂರಿಗರ ಟಾಪ್ ಡಿಸೈರೇಬಲ್ ಸ್ಟಾರ್‌ಗಳು
, ಮಂಗಳವಾರ, 21 ಮೇ 2013 (13:54 IST)
PR
ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮೆನ್ 2012 ಸ್ಪರ್ಧೆಯಲ್ಲಿ ಕಿಚ್ಚ ಸುದೀಪ್ ಹಾಗೂ ಮಹಿಳೆಯರ ವಿಭಾಗದಲ್ಲಿ ಲಕ್ಕಿ ಸ್ಟಾರ್ ರಮ್ಯಾ ಪ್ರಥಮ ಸ್ಥಾನಿಗಳಾಗಿ ಹೊರ ಹೊಮ್ಮಿದ್ದಾರೆ.

2012ರಲ್ಲಿ ಹೊಂದಿದ ಜನಪ್ರಿಯತೆಯನ್ನು ಆಧರಿಸಿ ಯಾರು ನಂ.1 ಸೆಲೆಬ್ರಿಟಿ ಎಂಬ ಕುರಿತು ಓಟ್ ಮಾಡಲು ನೆಟ್ಟಿಗರಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಬಂದ ಫಲಿತಾಂಶ, ಸುದೀಪ್‌ಗೆ ನಂ.1 ಪಟ್ಟ. ನಂತರದ ಸ್ಥಾನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ದಿಗಂತ್, ಆ ದಿನಗಳು ಚೇತನ್ ಮುಂತಾದವರು ಜಾಗ ಪಡೆದಿದ್ದಾರೆ.

webdunia
PR
ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ 9ನೇ ಸ್ಥಾನ, ದರ್ಶನ್ 10ನೇ ಸ್ಥಾನ, ಮನೀಷ್ ಪಾಂಡೆ 13ನೇ ಸ್ಥಾನ ಪಡೆದಿದ್ದಾರೆ.

ಮೋಸ್ಟ್ ಡಿಸೈರೇಬಲ್ ವುಮೆನ್ 2012 ವಿಭಾಗದಲ್ಲಿ ರಮ್ಯಾ ನಂ.1 ಪಟ್ಟ ತನ್ನದಾಗಿಸಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ಕೃತಿ ಕರಬಂಧ, ಅನೂಷ್ಕಾ ಶೆಟ್ಟಿ, ರಾಗಿಣಿ ದ್ವಿವೇದಿ, ಐಂದ್ರಿತಾ ರೇ, ನಿಧಿ ಸುಬ್ಬಯ್ಯ, ಪ್ರಿಯಾಮಣಿ, ಪ್ರಣೀತಾ ಸುಭಾಷ್ ಕಾಣಿಸಿಕೊಂಡಿದ್ದಾರೆ.

17ನೇ ಸ್ಥಾನದಲ್ಲಿ ರಾಧಿಕಾ ಪಂಡಿತ್, 20ನೇ ಸ್ಥಾನದಲ್ಲಿ ನಿತ್ಯಾ ಮೆನನ್, 24ರಲ್ಲಿ ಪಾರುಲ್, 25ರಲ್ಲಿ ಪೂಜಾ ಗಾಂಧಿ ಸ್ಥಾನ ಪಡೆದಿದ್ದಾರೆ.

ತಾವು ಮೋಸ್ಟ್ ಡಿಸೈರೇಬಲ್ ವ್ಯಕ್ತಿಗಳಾಗಿ ಆಯ್ಕೆಯಾಗಿರುವುದಕ್ಕೆ ಸುದೀಪ್ ಮತ್ತು ರಮ್ಯಾ ಇಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳಾಗಿ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವುದು ಇದಕ್ಕೆ ಕಾರಣ ಎಂದು ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada