Select Your Language

Notifications

webdunia
webdunia
webdunia
webdunia

ಸುದೀಪ್ ಅಕ್ಕನ ಮಗ ಸಂಚಿತ್ ಸ್ಯಾಂಡಲ್‌ವುಡ್‌ಗೆ

ಸುದೀಪ್ ಅಕ್ಕನ ಮಗ ಸಂಚಿತ್ ಸ್ಯಾಂಡಲ್‌ವುಡ್‌ಗೆ
, ಸೋಮವಾರ, 26 ಆಗಸ್ಟ್ 2013 (11:54 IST)
PR
ಕನ್ನಡ ಚಿತ್ರರಂಗಕ್ಕೆ ಒಬ್ಬರಾದ ಬಳಿಕ ಒಬ್ಬರಂತೆ ಹೊಸ ನಟರು ಪರಿಚಿತರಾಗುತ್ತಿದ್ದಾರೆ. ಅದರಲ್ಲೂ ಈಗ ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್‌ಗಳ ಸಮೀಪದ ಬಂಧುಗಳು ಅದನ್ನೇ ಅವಕಾಶವಾಗಿ ಮಾಡಿಕೊಂಡು ತಮ್ಮ ಪ್ರತಿಭೆ ತೋರುತ್ತಿದ್ದಾರೆ.

ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ವಿವೇಕ್ (ರವಿಚಂದ್ರನ್ ಸಂಬಂಧಿ) ಇದಕ್ಕೆ ಉತ್ತಮ ಉದಾಹರಣೆ. ಈಗ ಸ್ಯಾಂಡಲ್‌ವುಡ್‌ಗೆ ಪರಿಚಿತನಾಗುತ್ತಿರುವ ಮತ್ತೊಬ್ಬ ಹುಡುಗ ಸಂಚಿತ್. ಇನ್ನೂ ಹದಿನೆಂಟರ ಹರೆಯದ ಚಿಗುರು ಮೀಸೆಯ ಈ ಯುವಕ ಈಗಾಗಲೇ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಸಹಾಯಕ ನಿರ್ದೆಶಕನಾಗಿಯೂ ಕೆಲಸ ಮಾಡಿದ ಅನುಭವವಿದೆ.

ಇದೆಲ್ಲದರ ಜೊತೆ ಸೋದರ ಮಾವ ಸುದೀಪ್ ಅವರ ಪ್ರೋತ್ಸಾಹದ ಮಾತುಗಳಿವೆ. ಇವೆಲ್ಲಾ ಸಂಚಿತ್ ಚಿತ್ರರಂಗಕ್ಕೆ ಬರಲು ಮತ್ತಷ್ಟು ಶಕ್ತಿ ನೀಡಿವೆ. ಈಗಾಗಲೇ ಪಿಯುಸಿ ಮುಗಿಸಿರುವ ಸಂಚಿತ್ ಮುಂದಿನ ಶಿಕ್ಷಣವನ್ನು ಓಪನ್ ಯುನಿವರ್ಸಿಟಿ ಮೂಲಕ ಮುಂದುವರೆಸುವ ಪ್ಲಾನ್ ಮಾಡಿಕೊಂಡಿದ್ದಾರಂತೆ. ಇದಕ್ಕೆ ಅವರ ಮನೆಯವರೂ ಬೇಡ ಎಂದಿಲ್ಲ. ಬಿಡುವಿನ ಸಮಯದಲ್ಲಿ ಸುದೀಪ್ ಸ್ಟುಡಿಯೋಗೆ ತೆರಳಿ ಹೊಸದನ್ನು ಕಲಿಯುವ ಸಂಚಿತ್ ಚಿತ್ರರಂಗದಿಂದ ನಾನು ಕಲಿಯುವುದು ಇನ್ನೂ ಸಾಕಷ್ಟಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಸದ್ಯ ಅವರ ಆಸಕ್ತ ಇರುವುದು ನಿರ್ದೆಶನದತ್ತ. ಬಣ್ಣ ಹಚ್ಚಿಕೊಳ್ಳುವ ಬಗ್ಗೆ ನಾನಿನ್ನೂ ಚಿಂತಿಸಿಲ್ಲ, ಸದ್ಯ ನನ್ನ ಆಸಕ್ತಿ ಏನಿದ್ದರೂ ಸಿನೆಮಾ ನಿರ್ದೆಶನದತ್ತ ಹಾಗೂ ಅದರ ಮೇಕಿಂಗ್‌ನತ್ತ ಎಂದು ಪ್ರತಿಷ್ಠಿತ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮಾವನ ಚಿತ್ರದಲ್ಲಿ ತೊಡಗಿಸಿಕೊಂಡು ಪ್ರಾಕ್ಟಿಕಲ್ ಅನುಭವ ಸಿಕ್ಕ ಬಳಿಕ ನಿದರ್ೇಶನಕ್ಕೆ ಸಂಬಂಧಿಸಿದ ಕೋರ್ಸ್ ಒಂದನ್ನು ಯುಎಸ್‌ನಲ್ಲಿ ಮಾಡುವ ಯೋಜನೆ ಅವರದ್ದು. ಸಂಜಿತ್ ಸುದೀಪ್ ಅವರ ಅಕ್ಕ ಸುಜಾತಾ ಅವರ ಮಗ.

Share this Story:

Follow Webdunia kannada