Select Your Language

Notifications

webdunia
webdunia
webdunia
webdunia

ಸದ್ಯಕ್ಕೆ ನನಗೆ ಮದುವೆ ಆಗಲು ಆಸಕ್ತಿ ಇಲ್ಲ - ರಮ್ಯ

ಸದ್ಯಕ್ಕೆ ನನಗೆ ಮದುವೆ ಆಗಲು ಆಸಕ್ತಿ ಇಲ್ಲ - ರಮ್ಯ
, ಸೋಮವಾರ, 7 ಏಪ್ರಿಲ್ 2014 (09:30 IST)
PR
ನನಗೆ ಸದ್ಯಕ್ಕೆ ಮದುವೆ ಆಗುವ ಬಗ್ಗೆ ಆಸೆ-ಆಸ್ಥೆ ಮತ್ತು ಆಸಕ್ತಿ ಇಲ್ಲ ಎಂಬಂತಹ ಮಾತನ್ನು ಹೇಳಿದ್ದಾಳೆ ನಟಿ ಮತ್ತು ಎಂಪಿ ರಮ್ಯ. ಆಕೆ ಇತ್ತೀಚೆಗೆ ಖಾಸಗಿ ವಾಹಿಯೊಂದರಲ್ಲಿ ನಡೆಸಿದ ಸಂದರ್ಶನದಲ್ಲಿ ತನ್ನ ಮಾತನ್ನು ಹೇಳಿದ್ದಾಳೆ.

ಆಕೆಗೆ ವಿದೇಶಿ ಯುವಕನ ಜೊತೆಯಲ್ಲಿ ಪ್ರೀತಿ ಉಂಟಾಗಿದೆ, ಮದುವೆ ಆಗಿ ಬಿಡ್ತಾಳೆ ಎನ್ನುವ ಮಾತು ಹೆಚ್ಚು ಸುದ್ದಿಯಲ್ಲಿ ಇತ್ತು , ಆದರೆ ಕಾರಣಾಂತರಗಳಿಂದ ಆಕೆ ಆ ಬಗ್ಗೆ ಹೆಚ್ಚು ಮಾತಾನಾಡಿ ಇರಲಿಲ್ಲ ಇತ್ತೀಚಿನ ದಿನಗಳಲ್ಲಿ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಕೇಳಿದಾಗ ರಾಫೆಲ್ ನನಗೆ ಅತ್ಯುತ್ತಮ ಸ್ನೇಹಿತ.

webdunia
PR
ನನ್ನ ಮತ್ತು ಅವರ ಸ್ನೇಹ ಈಗಲು ಜಾರಿಯಲ್ಲಿದೆ ಎಂದಿದ್ದಾಳೆ. ಆಕೆ ಮತ್ತು ರಾಫಲ್ ಅವರ ಡೇಟಿಂಗ್ ಸಂಭ್ರಮ ಹೆಚ್ಚು ಸುದ್ದಿ ಮಾಡಿತ್ತು ಕೆಲವು ವರ್ಷಗಳ ಹಿಂದೆ. ಪೊರ್ಚ್ಗೀಸ್ ನ ಈ ಹುಡುಗನ ಜೊತೆ ರಮ್ಯ ಮದುವೆ ಆಗಿ ವಿದೇಶದಲ್ಲಿ ನೆಲೆಸುತ್ತಾಳೆ ಎಂಬಿತ್ಯಾದಿಯಾಗಿ ಸುದ್ದಿ ಹರಡಿತ್ತು ಆಗ.

ಆದರೆ ಅದ್ಯಾವುದು ನಡೆಯದೆ ಆಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಆ ಬಳಿಕ ಗೆದ್ದು ಫುಲ್ ರಾಜಕಾರಣಿ ಆಗಲು ಸಿನಿಮಾದಲ್ಲಿ ನಟಿಸಲ್ಲ ಎನ್ನುವ ಆಣೆ ಪ್ರಮಾಣ ಮಾಡಿದ್ದೂ ಇತ್ತೀಚಿನ ದಿನಗಳಲ್ಲಿ. ಈಗ ತಾನು ಸಂಪೂರ್ಣವಾಗಿ ರಾಜಕೀಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದೇನೆ. ಆದ್ದರಿಂದ ಮದುವೆ ಬಗ್ಗೆ ಆದ್ಯತೆ ನೀಡಲಾರೆ ಎಂದು ಹೇಳಿದ್ದಾಳೆ ಆಕೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada