Select Your Language

Notifications

webdunia
webdunia
webdunia
webdunia

ಶ್ರೀನಗರ ಕಿಟ್ಟಿಯ ಗೀತಾಂಜಲಿ ಪ್ರೇಮಕಥೆ !

ಶ್ರೀನಗರ ಕಿಟ್ಟಿಯ ಗೀತಾಂಜಲಿ ಪ್ರೇಮಕಥೆ !
, ಶನಿವಾರ, 25 ಜನವರಿ 2014 (09:22 IST)
PR
PR
ಶ್ರೀನಗರ ಕಿಟ್ಟಿ ಅವರ ಟೈಮ್ ಚೆನ್ನಾಗಿದೆ ಕಳೆದ ಎರಡು ವರ್ಷಗಳಿಂದ ಅವರ ಕೈ ತುಂಬಾ ಚಿತ್ರಗಳು ಮತ್ತು ಯಶಸ್ಸು ಸಹ ಜೊತೆಯಾಗಿದೆ.
ಅವರು ಮಾಡಿದ ಚಿತ್ರಗಳು ಗಳಿಕೆಯಲ್ಲಿ ಮುಂದಿದೆ. ಈಗ ಬಹುಪರಾಕ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಕಿಟ್ಟಿ. ಇವಿಷ್ಟಲ್ಲದೆ ಅವರಿಗೆ ಗೀತಾಂಜಲಿ ಅನ್ನುವ ಮತ್ತೊಂದು ಹೊಸ ಚಿತ್ರದಲಿ ನಟಿಸುವ ಅವಕಾಶ ದೊರೆತಿದೆ. ಆ ಚಿತ್ರದಲ್ಲಿ ಕಿಟ್ಟಿಗೆ ಇಬ್ಬರು ನಾಯಕಿಯರು. ಸನಾತನಿ ಮತ್ತು ನಿಖಿತಾ ನಾರಾಯಣ್ .

ಸನಾ ಎನ್ನುವ ಹೆಸರಿಂದ ಪಾಪ್ಯುಲರ್ ಆಗಿರುವ ಕನ್ನಡ ಸನಾತನಿ ಅನೇಕ ಕನ್ನಡ ಚಿತ್ರಗಳು ಮತ್ತು ರಿಯಾಲಿಟಿ ಶೋಗಳ ಮುಖಾಂತರ ತಮ್ಮನ್ನು ರುತಿಸಿಕೊಂಡಿದ್ದಾರೆ, ಅದೇ ರೀತಿ ನಟಿ ನಿಖಿತ ನಾರಾಯಣ್ ಅವರು ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಪ್ರಿಯರಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಇದು ಅವರ ಮೊದಲ ಕನ್ನಡ ಚಿತ್ರವಾಗಿದೆ. ಚಿತ್ರವನ್ನು ರಾಜಶೇಖರ್ ನಿರ್ದೇಶಿಸುತ್ತಿದ್ದಾರೆ. ರೊಮ್ಯಾಂಟಿಕ್ ಕಥಾ ಹಂದರ ಹೊಂದಿರುವ ಚಿತ್ರವಾಗಿದೆಯಂತೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆಯಂತೆ.

Share this Story:

Follow Webdunia kannada