Select Your Language

Notifications

webdunia
webdunia
webdunia
webdunia

ಶ್ರೀನಗರ ಕಿಟ್ಟಿಯ ಇಬ್ಬರು ಹೆಂಡಿರ ಕಹಾನಿ !

ಶ್ರೀನಗರ ಕಿಟ್ಟಿಯ ಇಬ್ಬರು ಹೆಂಡಿರ ಕಹಾನಿ !
, ಬುಧವಾರ, 2 ಏಪ್ರಿಲ್ 2014 (09:14 IST)
PR
ಕನ್ನಡ ಚಿತ್ರರಂಗದ ಬ್ಯುಸಿಯೇಸ್ಟ್ ನಟರಲ್ಲಿ ಶ್ರೀನಗರ ಕಿಟ್ಟಿ ಸಹ ಒಬ್ಬರು. ಅವರ ಚಿತ್ರಗಳು ಯಶಸ್ಸು ನೀಡುವುದರೊಂದಿಗೆ ಅಪಾರ ಸಂಖ್ಯೆಯ ಸಿನಿ ಆಸಕ್ತರನ್ನು ಸೃಷ್ಟಿ ಮಾಡಿದೆ. ಅಂದಂಗೆ ಈಗ ಹೇಳುವ ಸಂಗತಿ ಏನೆಂದರೆ , ಶ್ರೀನಗರ ಕಿಟ್ಟಿ ಗೆ ಇಬ್ಬರು ಹೆಂಡಿರು.

ಹೌದು ಅವರ ಮುಂದಿನ ಚಿತ್ರ ತೆಲುಗು ಚಿತ್ರ ಮಿಸ್ಸಮ್ಮ ದ ಕನ್ನಡ ರೀಮೇಕ್ ಸಿನಿಮಾ ನಮಸ್ತೆ ಮೇಡಂ ಚಿತ್ರದಲ್ಲಿ ಇಬ್ಬರ ಹೆಂಡಿರ ಮುದ್ದಿನ ಮಾವ ಆಗಿದ್ದಾರೆ. ಇಲ್ಲಿ ಕಿಟ್ಟಿಯ ಹೆಂಡತಿಯರಾಗಿ ರಾಗಿಣಿ ದ್ವಿವೇದಿ ಮತ್ತು ನಿಕೆಷಿ ಪಟೇಲ್ ಇದ್ದಾರೆ.

webdunia
PR
ಈ ಚಿತ್ರದಲ್ಲಿ ಒಬ್ಬ ಹೆಂಡತಿ ಬಾಸಮ್ಮ ಆಗಿದ್ದಾರೆ. ರಾಗಿಣಿ ದ್ವಿವೇದಿ ಇದರಲ್ಲಿ ಬಾಸ್ ರೋಲ್ ಮಾಡುತ್ತಿದ್ದಾರೆ. ಪ್ರಿಯಾಮಣಿ ಮೊದಲು ರಾಗಿಣಿ ಮಾಡುತ್ತಿರುವ ಪಾತ್ರಕ್ಕೆ ಆಯ್ಕೆ ಆಗಿದ್ದರು.ಆದರೆ ಆ ಜಾಗವನ್ನು ಈಗ ರಾಗಿಣಿ ತುಂಬಿದ್ದಾರೆ. ಈ ಚಿತ್ರದ ನಿರ್ಮಾಪಕರು ರವಿ ಆರ್ ಗರಣಿ .

ತೆಲುಗು ಚಿತ್ರರಸಿಕರನ್ನು ಆಕರ್ಷಿಸಿದ್ದ ಈ ಚಿತ್ರವು ಕನ್ನಡಿಗರನ್ನು ಯಾವ ಮಟ್ಟದಲ್ಲಿ ಸೆಳೆಯ ಬಹುದು ಎನ್ನುವ ಕುತೂಹಲ ಇಂಡಸ್ಟ್ರಿ ಗಿದೆ.. ಅದರ ಫಲಿತಾಂಶ ತಿಳಿಯಲು ಸಾಕಷ್ಟು ದಿನ ಕಾಯ ಬೇಕು.

Share this Story:

Follow Webdunia kannada