Select Your Language

Notifications

webdunia
webdunia
webdunia
webdunia

ಶಿವಣ್ಣನಿಗೆ 51ನೇ ಹುಟ್ಟುಹಬ್ಬದ ಸಂಭ್ರಮ

ಶಿವಣ್ಣನಿಗೆ 51ನೇ ಹುಟ್ಟುಹಬ್ಬದ ಸಂಭ್ರಮ
, ಸೋಮವಾರ, 15 ಜುಲೈ 2013 (12:35 IST)
PR
ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ನೋಡಲು ಅಭಿಮಾನಿಗಳು ಅವರ ಮನೆ ಮುಂದೆ ಮಧ್ಯರಾತ್ರಿಯೇ ಕಾದು ಕುಳಿತಿದ್ದರು. ಕೇಕ್ ಕತ್ತರಿಸಿ ಶಿವಣ್ಣಂಗೆ ಜೈ ಎನ್ನುವ ಮೂಲಕ ಅವರ ಸ್ವಗೃಹದಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು.

ಪತ್ನಿ ಗೀತಾ ಜೊತೆ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರ ಮೂಲಕ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡರು. ಎಂದಿನಂತೆ ಹೆಲ್ತ್ ಚೆಕಪ್ ಕ್ಯಾಂಪ್ ಕೂಡಾ ಆಯೋಜಿಸಲಾಗಿತ್ತು. ರವಿಚಂದ್ರನ್ ಮೊದಲಾದ ಗಣ್ಯರು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಪುನೀತ್, ರಾಘವೇಂದ್ರ ರಾಜ್‌ಕುಮಾರ್ ಸಹೋದರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಅವರ ಅಭಿಮಾನಿಗಳ ಸಂಘ ಉತ್ತರಾಖಂಡದ ನೆರೆ ಸಂತ್ರಸ್ತರಿಗಾಗಿ ಒಟ್ಟುಮಾಡಿದ ಹಣವನ್ನು ಚೆಕ್ ರೂಪದಲ್ಲಿ ಶಿವರಾಜ್‌ಕುಮಾರ್ ಹಸ್ತಾಂತರಿಸಿದರು. ಶಿವಣ್ಣ ಅದಕ್ಕೆ ತಮ್ಮ ಹಣವನ್ನೂ ಸೇರಿಸಿ ರಾಜ್ಯದ ಮುಖ್ಯಮಂತ್ರಿಯ ನೆರೆ ಪರಿಹಾರ ನಿಧಿಗೆ ನೀಡಿ ಉತ್ತರಾಖಂಡದ ಸಂತ್ರಸ್ತರಿಗೆ ತಲುಪಿಸುವಂತೆ ಕೇಳಿಕೊಳ್ಳಲಿದ್ದಾರೆ. ಈ ಮೂಲಕ ಶಿವಣ್ಣನ ಬರ್ಥ್ ಡೇ ಸಾಮಾಜಿಕ ಕಾರ್ಯಕ್ಕೆ ನೆರವಾಗುವ ಕಾರ್ಯಕ್ರಮವಾಗಿ ಬದಲಾಯಿತು.

Share this Story:

Follow Webdunia kannada