Select Your Language

Notifications

webdunia
webdunia
webdunia
webdunia

ಶಾಂದಾರ್ ಸಿನಿಮಾ ಮಾಡಲು ನನಗೆ ಆಲಿಯಾ ಭಟ್ ಸ್ಫೂರ್ತಿ- ಶಾಹೀದ್

ಶಾಂದಾರ್ ಸಿನಿಮಾ ಮಾಡಲು ನನಗೆ ಆಲಿಯಾ ಭಟ್ ಸ್ಫೂರ್ತಿ- ಶಾಹೀದ್
, ಸೋಮವಾರ, 31 ಆಗಸ್ಟ್ 2015 (10:45 IST)
ಆಲಿಯಾ ಭಟ್ ಹಾಗೂ ಶಾಹೀದ್ ಕಪೂರ್ ಶಾಂದಾರ್ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಸಿನಿಮಾದಲ್ಲಿ ನಟಿಸಲು ನನಗೆ ಪ್ರಮುಖ ಕಾರಣ ಆಲಿಯಾ ಅಂತಾ ಶಾಹೀದ್ ಹೇಳಿದ್ದಾರೆ.

ನಾನು ಆಲಿಯಾ ಜೊತೆ ಅಭಿನಯಿಸಲು ಕಾಯುತ್ತಿದ್ದೆ. ಅವಕಾಶ ನನಗೆ ಶಾಂದಾರ್ ಸಿನಿಮಾದಲ್ಲಿ ಸಿಕ್ಕಿತ್ತು. ಅದಕ್ಕಾಗಿ ಸಿನಿಮಾವನ್ನು ಕೂಡಲೇ ಒಪ್ಪಿಕೊಂಡಿದೆ ಅಂತಾ ಅವರು ಹೇಳಿದ್ದಾರೆ. ಇನ್ನು ಶಾಂದಾರ್ ಸಿನಿಮಾದ ಜೊತೆಗೆ ಶಾಹೀದ್ ಅವರಿಗೆ ಮತ್ತೊಮ್ಮೆ ಆಲಿಯಾ ಜೊತೆ ಅಭಿನಯಿಸೋ ಅವಕಾಶವೂ ಸಿಕ್ಕಿದೆ. ಉಡ್ತಾ ಪಂಜಾಬ್ ಸಿನಿಮಾದಲ್ಲೂ ಅವರು ಆಲಿಯಾ ಜೊತೆ ಅಭಿನಯಿಸುತ್ತಿದ್ದಾರೆ.
 
ಇನ್ನು ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಶಾಂದಾರ್ ಸಿನಿಮಾದ ಕುರಿತು ಕುತೂಹಲವನ್ನು ಹೆಚ್ಚಿಸಿದೆ.  ಶಾಂದಾರ್ ಸಿನಿಮಾವನ್ನು ವಿಕಾಸ್ ಬಹಲ್ ನಿರ್ದೇಶಿಸಿದ್ದು, ಫ್ಯಾಂಟಮ್ ಸಿನಿಮಾ ತಂಡವೇ ಇದರ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದೆ. ಅಕ್ಟೋಬರ್ 22 ರಂದು ಈ ಸಿನಿಮಾ ಪ್ರೇಕ್ಷಕರೆದುರಿಗೆ ಬರಲಿದೆ.

Share this Story:

Follow Webdunia kannada