Select Your Language

Notifications

webdunia
webdunia
webdunia
webdunia

ಶರಣ್ ಬಾಣಲೆಗೆ ಜಾರಿದ 'ತುಪ್ಪ': ರಾಗಿಣಿ 'ವಿ'ಚಿತ್ರ ಐಟಂ

ಶರಣ್ ಬಾಣಲೆಗೆ ಜಾರಿದ 'ತುಪ್ಪ': ರಾಗಿಣಿ 'ವಿ'ಚಿತ್ರ ಐಟಂ
PR
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 'ಶಿವ' ಹಾಗೂ ಜೋಗಿ ಪ್ರೇಮ್ ನಾಯಕನಾಗಿದ್ದ 'ಪ್ರೇಮ್ ಅಡ್ಡ' ಚಿತ್ರಗಳಲ್ಲಿ ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ಕುಣಿಯಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಇತ್ತು. ಆದರೆ ಅದು ಕೆಲವೇ ದಿನಗಳಲ್ಲಿ ಠುಸ್ಸಾಯ್ತು. ಈ ರೀತಿ ರಾಗಿಣಿ ಕುರಿತ ಪುಕಾರುಗಳಿಗೆ ಲೆಕ್ಕವಿಲ್ಲ. ಆರಂಭದಲ್ಲಿ ಒಂದು ಹೇಳಿಕೆ ಕೊಟ್ಟು, ನಂತರ ಇನ್ನೊಂದು ಕಡೆ ನುಣುಚಿಕೊಳ್ಳುವುದನ್ನೇ ಅವರು ಜಾಯಮಾನ ಮಾಡಿಕೊಂಡಿದ್ದರು!

ಹಾಗಾಗಬಾರದು ಎಂದು ಈ ಬಾರಿ ನಿರ್ಮಾಪಕ-ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ. ರಾಗಿಣಿ ಕೈಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡೇ ಸುದ್ದಿ ಬಹಿರಂಗಪಡಿಸಿದ್ದಾರೆ. ಆ ಚಿತ್ರದ ಹೆಸರು 'ವಿ'. ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ, ಮೋಹನ್ ಛಾಬ್ರಿಯಾ ನಿರ್ದೇಶನದ ಚಿತ್ರ. ಇದರಲ್ಲಿ ಶರಣ್ ನಾಯಕ. ಈ ಚಿತ್ರದ ಹಾಡೊಂದರಲ್ಲಿ ರಾಗಿಣಿ ಸೊಂಟ ಬಳುಕಿಸಲಿದ್ದಾರೆ.

ಮಾಮೂಲಿಯಂತೆ ಈ ಹಾಡನ್ನೂ ಐಟಂ ಹಾಡು ಎಂದು ಕರೆಯಲು ನಿರ್ದೇಶಕರು ಸಿದ್ಧರಿಲ್ಲ. ಇದು ಸಿನಿಮಾಕ್ಕೆ ಪೂರಕವಾಗಿರುವ ಹಾಡು. ಒತ್ತಾಯಪೂರ್ವಕವಾಗಿ ಸೇರಿಸುತ್ತಿಲ್ಲ. ಫಾಸ್ಟ್-ಪೆಪ್ಪಿ ಟ್ರ್ಯಾಕ್. ಐಟಂ ಹಾಡು ಅಲ್ಲ. ರಾಗಿಣಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಂದಕಿಶೋರ್ ಹೇಳುತ್ತಾರೆ.

ಇದನ್ನೇ ನಿರ್ಮಾಪಕ ಮೋಹನ್ ಛಾಬ್ರಿಯಾ ಹೇಳಿರುವುದು ಹೀಗೆ: ಪ್ರೇಮ್ ಅಡ್ಡ, ಎಲೆಕ್ಷನ್ ಮುಂತಾದ ಚಿತ್ರಗಳಲ್ಲಿ ರಾಗಿಣಿ ದ್ವಿವೇದಿ ಐಟಂ ಸಾಂಗ್ ಮಾಡುತ್ತಾರೆ ಎಂಬ ಸುದ್ದಿಯನ್ನು ಎಲ್ಲರೂ ಕೇಳಿದ್ದೀರಿ. ಕೆಲವು ಸಮಯದ ನಂತರ ಅವೆಲ್ಲವೂ ಸುಳ್ಳಾಗಿವೆ. ಆದರೆ ನಾವು ಒಪ್ಪಂದಕ್ಕೆ ರಾಗಿಣಿಯಿಂದ ಸಹಿ ಹಾಕಿಸಿಕೊಂಡಿದ್ದೇವೆ. ಹಾಗಾಗಿ ಇದು ಖಚಿತ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿಗೆ ಕೈಲಾಶ್ ಖೇರ್ ಧ್ವನಿಯಾಗಿದ್ದಾರೆ. ಈ ಹಾಡಿಗಾಗಿಯೇ ಮೂರು ವಿಭಿನ್ನ ಸೆಟ್‌ಗಳನ್ನು ಹಾಕಲಾಗುತ್ತಿದೆಯಂತೆ. 50ಕ್ಕೂ ಹೆಚ್ಚು ಡ್ಯಾನ್ಸರುಗಳು ಇದರಲ್ಲಿ ಕುಣಿಯಲಿದ್ದಾರೆ. ಈ ವಾರಾಂತ್ಯದಲ್ಲೇ ಚಿತ್ರೀಕರಣ.

ತುಪ್ಪ ಬೇಕಾ ತುಪ್ಪ ಎಂದು ಇಡೀ ಕರ್ನಾಟಕಕ್ಕೆ ತುಪ್ಪದ ರುಚಿ ತೋರಿಸಿದ್ದ ರಾಗಿಣಿ ಈಗ ಶರಣ್ ನಾಯಕನಾಗಿರುವ ಚಿತ್ರದ ಐಟಂನಲ್ಲಿ ಪ್ರೇಕ್ಷಕರಿಗೆ ಏನು ಬಡಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

Share this Story:

Follow Webdunia kannada