Select Your Language

Notifications

webdunia
webdunia
webdunia
webdunia

ವೀಣಾ ಮಲಿಕ್‌ಗೆ ಕನ್ನಡದಲ್ಲಿ ನಿಜಕ್ಕೂ 1 ಕೋಟಿ ಕೊಟ್ರಾ?

ವೀಣಾ ಮಲಿಕ್‌ಗೆ ಕನ್ನಡದಲ್ಲಿ ನಿಜಕ್ಕೂ 1 ಕೋಟಿ ಕೊಟ್ರಾ?
PR
ಆಕೆ ಐಶ್ವರ್ಯಾ ರೈ, ಕತ್ರಿನಾ ಕೈಫ್, ಪ್ರಿಯಾಂಕಾ ಛೋಪ್ರಾ, ಕರೀನಾ ಕಪೂರ್ -- ಊಹುಂ ಇವರ ಯಾರ ಹತ್ತಿರಕ್ಕೂ ಸುಳಿಯದ ನಟಿ. ಅಷ್ಟೇ ಯಾಕೆ, ಬಾಲಿವುಡ್‌ನ ಮೂರನೇ ದರ್ಜೆಯ ನಟಿಯರ ಸಾಲಿನಲ್ಲೂ ಹೆಸರು ಮಾಡದವಳು. ಹಾಗಿದ್ದರೂ ಸ್ಯಾಂಡಲ್‌ವುಡ್‌ಗೆ ಎಳೆದು ತರಲಾಯಿತು. ಈಗ ಬಂದಿರುವ ಸುದ್ದಿ 1 ಕೋಟಿ ರೂ. ಸಂಭಾವನೆ!

ಹೆಸರು ವೀಣಾ ಮಲಿಕ್. ಉಗ್ರರ ಕಾರ್ಖಾನೆ ಪಾಕಿಸ್ತಾನದವಳು. ಕ್ರಿಕೆಟಿಗ ಮೊಹಮ್ಮದ್ ಆಸಿಫ್ ಜತೆ ಒಂದಷ್ಟು ಕಾಲ ಓಡಾಡಿದ ನಂತರ ರಿಯಾಲಿಟಿ ಶೋ ಮೂಲಕ ಭಾರತ ಪ್ರವೇಶಿಸಿದವಳಿಗೆ ಬಾಲಿವುಡ್ ರತ್ನಗಂಬಳಿ ಹಾಸದಿದ್ದರೂ, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅಷ್ಟರಲ್ಲೇ ಕನ್ನಡದ 'ಡರ್ಟಿ ಪಿಕ್ಚರ್'ಗೆ ನಿರ್ಮಾಪಕ ವೆಂಕಟಪ್ಪ ಆರಿಸಿಯೇ ಬಿಟ್ಟರು.

85 ಲಕ್ಷ ರೂ. ಸಂಭಾವನೆಯಂತೆ ಎಂದು ಆಗಲೇ ಸುದ್ದಿಯಾಗಿತ್ತು. ಆದರೆ ಈಗ 15 ಲಕ್ಷ ಸೇರಿದೆ. ಒಟ್ಟು 1 ಕೋಟಿ ರೂ. ಸಂಭಾವನೆ ವೀಣಾ ಮಲಿಕ್‌ಗೆ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಆಕೆಯಲ್ಲಿರುವ ಯಾವ ಪ್ರತಿಭೆಗೆ ಇಷ್ಟು ದುಬಾರಿ ಸಂಭಾವನೆ ನೀಡಲಾಗಿದೆ ಅನ್ನೋದನ್ನು ನಿರ್ದೇಶಕ-ನಿರ್ಮಾಪಕರೇ ಹೇಳಬೇಕು!

ಅದಕ್ಕಿಂತಲೂ ಹೆಚ್ಚಾಗಿ ವೀಣಾ ಮಲಿಕ್‌ಗೆ 1 ಕೋಟಿ ರೂ. ಸಂಭಾವನೆ ಕೊಟ್ಟಿರುವ ಬಗ್ಗೆಯೇ ಶಂಕೆಗಳಿವೆ. ಸುಮ್ಮನೆ ಸುದ್ದಿಗಾಗಿ, ಪ್ರಚಾರಕ್ಕಾಗಿ ಚಿತ್ರತಂಡ ಇಂತಹ ಪುಕಾರು ಹರಡುತ್ತಿದೆ ಎಂಬ ಮಾತುಗಳೂ ಇವೆ.

ನ್ಯಾಯಾಲಯದ ಆದೇಶದ ನಂತರ ಚಿತ್ರದ ಹೆಸರು 'ಸಿಲ್ಕ್ ಸಖತ್ ಹಾಟ್ ಮಗಾ' ಎಂಬಷ್ಟಕ್ಕೇ ಸೀಮಿತವಾಗಿದೆ. ಚಿತ್ರದಲ್ಲಿ ನಿರ್ಮಾಪಕ ವೆಂಕಟಪ್ಪ ಪುತ್ರ ಅಕ್ಷಯ್ ನಾಯಕ. ತ್ರಿಶೂಲ್ ನಿರ್ದೇಶಕರು. ಒಂದಷ್ಟು ಮಸಾಲೆ ಐಟಂಗಳನ್ನು ತುಂಬಿ, ಅದನ್ನು ಸಿಲ್ಕ್ ಸ್ಮಿತಾ ಬಯೋಗ್ರಫಿ ಎಂದು ಬಿಂಬಿಸಿ ಲಾಭ ಮಾಡಿಕೊಳ್ಳುವ ಯತ್ನದಲ್ಲಿ ಚಿತ್ರತಂಡ ಇರುವಂತಿದೆ.

ಹೀಗೆ ಪರದೇಸಿ ನಾಯಕಿಗೆ ಕೋಟಿ ಸಂಭಾವನೆ ಸಿಗುವುದರೊಂದಿಗೆ ನಮ್ಮದೇ ಕನ್ನಡದ ಹುಡುಗಿಯರು ಲಕ್ಷಕ್ಕೇ ಸೀಮಿತರಾಗಿ ಕೊರಗುತ್ತಿದ್ದಾರೆ. ಸದ್ಯ ಕನ್ನಡದಲ್ಲಿ ವೀಣಾ ಹೊರತುಪಡಿಸಿದರೆ ಗರಿಷ್ಠ ಸಂಭಾವನೆ ಪಡೆಯುತ್ತಿರುವ ನಟಿ ರಮ್ಯಾ. ಅವರು 'ನೀರ್ ದೋಸೆ' ಚಿತ್ರಕ್ಕೆ 52 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅವರನ್ನು ಹೊರತುಪಡಿಸಿದರೆ ರಾಗಿಣಿ 30 ಲಕ್ಷದ ಆಸುಪಾಸಿನಲ್ಲಿದ್ದಾರೆ.

Share this Story:

Follow Webdunia kannada