Webdunia - Bharat's app for daily news and videos

Install App

ವಿಷ್ಣುವರ್ಧನ್ ಶ್ರೇಷ್ಠ ನಟ, ಅನು ಪ್ರಭಾಕರ್ ಶ್ರೇಷ್ಠ ನಟಿ

Webdunia
EVENT
ಬಾಲಿವುಡ್‌ನ ಚಿಲ್ಲರೆಗಳೂ ಪಡೆದುಕೊಳ್ಳುವ ಪದ್ಮ ಪ್ರಶಸ್ತಿಗಳಲ್ಲಿ ಒಂದೂ ನಮ್ಮ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಸಿಕ್ಕಿರಲಿಲ್ಲ. ಈ ಸಂಬಂಧ ಗಮನ ಸೆಳೆಯಬೇಕಿದ್ದವರು ಸುಮ್ಮನಿದ್ದರು. ಆದರೆ ವಿಷ್ಣು ಆಪ್ತರೆನಿಸಿಕೊಂಡಿದ್ದ ದ್ವಾರಕೀಶ್ ಹಾಗೆ ಮಾಡಿಲ್ಲ. ಆಪ್ತರಕ್ಷಕದಲ್ಲಿನ ನಟನೆಗಾಗಿ 2009-10ರ ಸಾಲಿನ ಶ್ರೇಷ್ಠ ನಟ ಪ್ರಶಸ್ತಿಯನ್ನು ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ದ್ವಾರಕೀಶ್ ನೇತೃತ್ವದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ಪ್ರಕಟಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಶಸ್ತಿ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬುಧವಾರ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ವಿಷ್ಣುವರ್ಧನ್ ತನ್ನ ನಟನೆಗಾಗಿ ಪಡೆದ ಕೊನೆಯ ಪ್ರಶಸ್ತಿ ಎಂಬ ಹೆಗ್ಗಳಿಕೆಯೊಂದಷ್ಟೇ ಉಳಿದುಕೊಂಡಿದೆ. ಅವರು ನಟಿಸಿದ ಕೊನೆಯ ಸೂಪರ್ ಹಿಟ್ ಚಿತ್ರ 'ಆಪ್ತರಕ್ಷಕ'.

ಉಳಿದಂತೆ ಶ್ರೇಷ್ಠ ನಟಿ ಪ್ರಶಸ್ತಿ ಅನುಪ್ರಭಾಕರ್ ಪಾಲಾಗಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ರಸಋಷಿ ಕುವೆಂಪು ಚಿತ್ರಕ್ಕೆ ಸಂದರೆ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಕ್ರಮವಾಗಿ ಮನಸಾರೆ ಮತ್ತು ಲವ್ ಗುರು ಚಿತ್ರಗಳಿಗೆ ಸಿಕ್ಕಿದೆ. ಹಿರಿಯ ನಟ ಸುದರ್ಶನ್ ಅವರಿಗೆ ರಾಜ್‌ಕುಮಾರ್ ಪ್ರಶಸ್ತಿ, ಗೀತೆ ರಚನೆಕಾರ ಸಿ.ವಿ. ಶಂಕರ್‌ಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಿರಿಯ ನಿರ್ಮಾಪಕ ಅಂಕಲಗಿಯವರಿಗೆ ವಿಷ್ಣುವರ್ಧನ್ ಪ್ರಶಸ್ತಿಗಳನ್ನೂ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ 2009-10ರ ಪಟ್ಟಿ ಹೀಗಿದೆ:

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಗೀತ ಸಾಹಿತಿ ಸಿ.ವಿ. ಶಿವಶಂಕರ್
ಡಾ. ರಾಜ್‌ಕುಮಾರ್ ಪ್ರಶಸ್ತಿ: ನಟ ಆರ್.ಎನ್. ಸುದರ್ಶನ್
ಡಾ. ವಿಷ್ಣುವರ್ಧನ್ ಪ್ರಶಸ್ತಿ: ನಿರ್ಮಾಪಕ ಎಸ್.ವಿ. ಅಂಕಲಗಿ
ಮೊದಲ ಅತ್ಯುತ್ತಮ ಚಿತ್ರ: ರಸಋಷಿ ಕುವೆಂಪು (ನಿರ್ದೇಶಕ - ಋತ್ವಿಕ್ ಸಿಂಹ)
ಎರಡನೇ ಅತ್ಯುತ್ತಮ ಚಿತ್ರ: ಮನಸಾರೆ (ನಿರ್ದೇಶಕ - ಯೋಗರಾಜ್ ಭಟ್)
ಮೂರನೇ ಅತ್ಯುತ್ತಮ ಚಿತ್ರ: ಲವ್ ಗುರು (ನಿರ್ದೇಶಕ - ಪ್ರಶಾಂತ್)
ಅತ್ಯುತ್ತಮ ನಟ: ವಿಷ್ಣುವರ್ಧನ್ (ಆಪ್ತರಕ್ಷಕ)
ಅತ್ಯುತ್ತಮ ನಟಿ: ಅನು ಪ್ರಭಾಕರ್ (ಪರೀಕ್ಷೆ)
ಅತ್ಯುತ್ತಮ ಕಥೆ: ನಾಗತಿಹಳ್ಳಿ ಚಂದ್ರಶೇಖರ್ (ಒಲವೇ ಜೀವನ ಲೆಕ್ಕಾಚಾರ)
ಅತ್ಯುತ್ತಮ ಚಿತ್ರಕಥೆ: ಗುರುಪ್ರಸಾದ್ (ಎದ್ದೇಳು ಮಂಜುನಾಥ)
ಅತ್ಯುತ್ತಮ ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ (ಸತ್ಯ)
ಅತ್ಯುತ್ತಮ ಛಾಯಾಗ್ರಾಹಕ: ಸುಂದರನಾಥ್ ಸುವರ್ಣ (ಕಳ್ಳರ ಸಂತೆ)
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ. ಹರಿಕೃಷ್ಣ
ಅತ್ಯುತ್ತಮ ಗಾಯಕ: ಟಿಪ್ಪು (ರಾಜ್)
ಅತ್ಯುತ್ತಮ ಗಾಯಕಿ: ಲಕ್ಷ್ಮಿ ನಾಗರಾಜ್ (ಆಪ್ತರಕ್ಷಕ)
ಅತ್ಯುತ್ತಮ ಪ್ರಾದೇಶಿಕ ಚಿತ್ರ: ಕಾಜರ್ (ಕೊಂಕಣಿ)
ವಿಶೇಷ ಪ್ರಶಸ್ತಿ: ಶಬರಿ (ನಿರ್ದೇಶಕ - ಬರಗೂರು ರಾಮಚಂದ್ರಪ್ಪ)
ಮಕ್ಕಳ ಅತ್ಯುತ್ತಮ ಚಿತ್ರ: ಚಿನ್ನದ ಬಳೆ, ಗುರುಕುಲ
ಅತ್ಯುತ್ತಮ ಪೋಷಕ ನಟ: ನೀನಾಸಂ ಅಶ್ವತ್ಥ್ (ಬನ್ನಿ)
ಅತ್ಯುತ್ತಮ ಪೋಷಕ ನಟಿ: ಚಂದ್ರಕಲಾ (ಋಣಾನುಬಂಧ)
ಅತ್ಯುತ್ತಮ ಸಂಭಾಷಣೆ: ಗುಣಗಿ ಮಹಾದುರ್ಗ
ಅತ್ಯುತ್ತಮ ಬಾಲ ನಟ: ಮಾಸ್ಟರ್ ಚಿರಂಜೀವಿ
ಅತ್ಯುತ್ತಮ ಬಾಲ ನಟಿ: ಬೇಬಿ ಮಧುಶ್ರೀ

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments