Select Your Language

Notifications

webdunia
webdunia
webdunia
webdunia

ವಿಕ್ಟರಿ ಚಿತ್ರದ ಮೇಲೆ ಕೇಸು ದಾಖಲು: 1 ಕೋಟಿ ಪರಿಹಾರಕ್ಕೆ ಆಗ್ರಹ

ವಿಕ್ಟರಿ ಚಿತ್ರದ ಮೇಲೆ ಕೇಸು ದಾಖಲು: 1 ಕೋಟಿ ಪರಿಹಾರಕ್ಕೆ ಆಗ್ರಹ
ಬೆಂಗಳೂರು , ಶನಿವಾರ, 31 ಆಗಸ್ಟ್ 2013 (10:37 IST)
PR
ಶರಣ್ ಅಭಿನಯದ ಕಾಮಿಡಿ ಚಿತ್ರ ವಿಕ್ಟರಿ ರಾಜ್ಯಾದ್ಯಂತ ತೆರೆಕಂಡು ಉತ್ತಮ ಹೆಸರು ಗಳಿಸುತ್ತಿದೆ. ಚಿತ್ರದ ಹಾಡೊಂದಕ್ಕೆ ತುಪ್ಪದ ಬೆಡಗಿ ರಾಗಿಣಿ ಹೆಜ್ಜೆ ಹಾಕಿದ್ದು ನಿಮಗೆಲ್ಲಾ ಗೊತ್ತೇ ಇದೆ. ಯಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಎಂಬ ಹಾಡಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ ಈ ಹಾಡನ್ನು ರಚಿಸಿರುವ ಕನ್ನಡ ಕುಮಾರ್ ತಮ್ಮ ಅನುಮತಿ ಇಲ್ಲದೆ ಈ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಕೋಟರ್್ ಮೆಟ್ಟಿಲೇರಿದ್ದಾರೆ. ಬುಧವಾರ ಅವರು ಚಿತ್ರದ ನಿರ್ಮಾಪಕರ ಮೇಲೆ ಕೇಸು ದಾಖಲಿಸಿದ್ದು 1 ಕೋಟಿ ರೂಪಾಯಿ ನಷ್ಟ ಪರಿಹಾರ ಕೊಡುವಂತೆ ಕೋರಿದ್ದಾರೆ. ಅದರೊಂದಿಗೆ ಚಿತ್ರವನ್ನೂ ಪ್ರದರ್ಶಿಸದಂತೆ ಕೋರ್ಟ್ ತಡೆ ನೀಡಬೇಕು ಎಂದು ಕೋರಿದ್ದಾರೆ.

ಇದೇ ವಿಚಾರವಾಗಿ ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿಗೂ ತಮ್ಮ ದೂರು ಸಲ್ಲಿಸಿದ್ದಾರೆ. ಕುಮಾರ್ 1998ರಲ್ಲಿ ಜಾಗೃತಿ ಸೇನೆಯ ಅಕ್ಕನ ಮಗಳು ಎಂಬ ಆಲ್ಬಂ ಕ್ಯಾಸೆಟ್ ಬಿಡುಗಡೆ ಮಾಡಿದ್ದರು. ಆ ಕ್ಯಾಸೆಟ್ನಲ್ಲಿ ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವ ಎಂಬ ಇವರ ಸ್ವರಚನೆಯ ಹಾಡೂ ಇತ್ತು. ಈಗ ವಿಕ್ಟರಿ ಚಿತ್ರದಲ್ಲಿ ತಮ್ಮ ಹಾಡನ್ನು ದ್ವಂದ್ವಾರ್ಥ ಹಾಗೂ ಅಶ್ಲೀಲ ಎನಿಸುವ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ ಹಾಗೂ ಅಗತ್ಯಕ್ಕೆ ತಕ್ಕಂತೆ ತಿರುಚಲಾಗಿದೆ ಎಂಬುದು ಅವರ ಆರೋಪ. ಮೂಲಗೀತೆಯ ಸಂಗೀತ ಹಾಗೂ ರಾಗ ಸಂಯೋಜನೆ ಅದ್ಭುತವಾಗಿದ್ದು ಇಲ್ಲಿ ಹಾಡಿನ ಸಾಲುಗಳನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ವಿಕ್ಟರಿ ಚಿತ್ರಕ್ಕೆ ಈ ಹಾಡನ್ನು ಅನುಮತಿಯಿಲ್ಲದೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada