Webdunia - Bharat's app for daily news and videos

Install App

ಲವ್, ಸೆಕ್ಸ್, ದೋಖಾ: 'ಸಿಲ್ಕ್ ಸಖತ್ ಮಗಾ' ವಯಸ್ಕರಿಗೆ ಮಾತ್ರ!

Webdunia
ಗುರುವಾರ, 13 ಜೂನ್ 2013 (15:13 IST)
PR
' ಸಿಲ್ಕ್ ಸಖತ್ ಹಾಟ್ ಮಗಾ' ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಬಚಾವ್ ಆಗಿದೆ. ಚಿತ್ರದ ಪೋಸ್ಟರುಗಳನ್ನು ನೋಡಿದವರಿಗೆ ಚಿತ್ರ ಟ್ರಿಬ್ಯುನಲ್‌ಗೆ ಹೋಗಬಹುದು ಎಂಬ ಭೀತಿಯಿತ್ತು. ಅಂತಹ ಉದಾಹರಣೆಗಳೂ ಇವೆ. ಆದರೆ ಈ ಚಿತ್ರ ಮಾತ್ರ 'ಎ' ಪ್ರಮಾಣಪತ್ರದೊಂದಿಗೆ ವಯಸ್ಕರಿಗೆ ಮಾತ್ರ ಎಂಬ ಹಣೆಪಟ್ಟಿಯಲ್ಲಿ ಬಿಡುಗಡೆಗೆ ಅಧಿಕೃತ ಒಪ್ಪಿಗೆ ಪಡೆದಿದೆ!

' ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೆ ಇರುವುದು ಸಿಲ್ಕ್ ಸ್ಮಿತಾ ಜೀವನದ ಕಥೆ ಎನ್ನುವುದು ಚಿತ್ರತಂಡದ ಒಂದು ಹಂತದವರೆಗಿನ ವಾದ. ಆದರೆ ಅದರಲ್ಲಿ ಸಿಲ್ಕ್ ಕಥೆಗಿಂತ ಬೇರೆ ಮಸಾಲೆಗಳೇ ಜಾಸ್ತಿ. ನಟಿಯೊಬ್ಬಳ ಲವ್, ಸೆಕ್ಸ್, ದೋಖಾವನ್ನೇ ಮೆರೆಸಲಾಗಿದೆ. ಪಾತ್ರಕ್ಕಾಗಿ ಸಾಕಷ್ಟು ಮಸಾಲೆ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

PR
ಚಿತ್ರದ ನಾಯಕಿ ವೀಣಾ ಮಲಿಕ್ ಗೊತ್ತೇ ಇದೆ, ಪಾಕಿಸ್ತಾನ ಮೂಲದ ಸೆಕ್ಸ್ ಬಾಂಬ್. ಎಲ್ಲಿ ಹೋದರೂ ವಿವಾದ ಹುಟ್ಟು ಹಾಕುವ ನಟಿ. ಈಕೆಗೆ ನಾಯಕನಾಗಿರುವುದು ಈ ಚಿತ್ರದ ನಿರ್ಮಾಪಕ ವೆಂಕಟಪ್ಪ ಅವರ ಪುತ್ರ ಅಕ್ಷಯ್. ಈ ಹಿಂದೆ 'ಬಾಬಾ' ಎಂಬ ಚಿತ್ರ ನಿರ್ದೇಶಿಸಿದ್ದ ತ್ರಿಶೂಲ್ ಇಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ.

ಇದೀಗ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ ಎ ಪ್ರಮಾಣಪತ್ರವನ್ನು ನೀಡಿರುವುದರಿಂದ ಚಿತ್ರವನ್ನು ವಯಸ್ಕರಷ್ಟೇ ನೋಡಬಹುದು. 18 ವರ್ಷದೊಳಗಿನವರಿಗೆ ಚಿತ್ರಮಂದಿರ ಪ್ರವೇಶಿಸಲು ಕಾನೂನು ಪ್ರಕಾರ ಅವಕಾಶವಿಲ್ಲ. ಅಕ್ಷಯ್ ಮತ್ತು ವೀಣಾ ಮಲಿಕ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಅತಿರೇಕ ಎನ್ನುವಷ್ಟು ಹಾಟ್ ಆಗಿರುವುದರಿಂದ ಸೆನ್ಸಾರ್ ಈ ನಿರ್ಧಾರಕ್ಕೆ ಬಂದಿದೆ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡುವ ಮೊದಲು ಎಷ್ಟು ಕತ್ತರಿ ಪ್ರಯೋಗ ಮಾಡಿದೆ ಎಂಬ ಮಾಹಿತಿಯಿಲ್ಲ. ಇದೀಗ ಪ್ರಮಾಣಪತ್ರ ಸಿಗುವುದರೊಂದಿಗೆ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಜುಲೈ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments